ಎಸ್ಬಿಐ ಗ್ರಾಹಕರಿಗೆ ಖುಷಿಯ ಸುದ್ದಿಯೊಂದಿದೆ. ಎಸ್ಬಿಐ ತನ್ನ ಅನೇಕ ಸೇವೆಗಳನ್ನು ಆನ್ಲೈನ್ ಮೂಲಕ ಗ್ರಾಹಕರಿಗೆ ನೀಡ್ತಿದೆ. ಈಗ ಬ್ಯಾಂಕ್ ಮತ್ತೊಂದು ಕೆಲಸವನ್ನು ಸುಲಭಗೊಳಿಸಿದೆ. ಎಸ್ಬಿಐ ಗ್ರಾಹಕರು ಮನೆಯಲ್ಲಿಯೇ ಕುಳಿತು,ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅಷ್ಟೇ ಅಲ್ಲ ಐದು ವಹಿವಾಟಿನ ಮಾಹಿತಿ ಪಡೆಯಬಹುದು. ಇದಕ್ಕೆ ನೀವು ಯಾವುದೇ ವೆಬ್ಸೈಟ್ ಗೆ ಲಾಗಿನ್ ಆಗ್ಬೇಕಾಗಿಲ್ಲ. ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ನಿಮ್ಮ ಕೆಲಸ ಮಾಡಬಹುದು.
ಎಸ್ಬಿಐ ಇದಕ್ಕಾಗಿ ಟೋಲ್ ಫ್ರೀ ಸಂಖ್ಯೆ ನೀಡಿದೆ. ಅದಕ್ಕೆ ಕರೆ ಮಾಡುವ ಮೂಲಕ ಅಥವಾ ಅದಕ್ಕೆ ಸಂದೇಶ ರವಾನೆ ಮಾಡುವ ಮೂಲಕ ನೀವು ಬ್ಯಾಂಕ್ ಬ್ಯಾಲೆನ್ಸ್ ತಿಳಿಯಬಹುದು. ಎಸ್ಬಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿಯನ್ನು ನೀಡಿದೆ.
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1800 1234 ಟೋಲ್ ಫ್ರೀ ಸಂಖ್ಯೆ ನೀಡಿದೆ. ಇದಕ್ಕೆ ಕರೆ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ತಿಳಿಯಬಹುದು. ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಎಟಿಎಂ ಕಾರ್ಡ್ ನಿರ್ಬಂಧಿಸಬಹುದು.ಎಟಿಎಂ ಪಿನ್ ಬದಲಿಸಬಹುದು.