ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾದ ಸಾರ್ವಜನಿಕ ಪ್ರಾವಿಡೆಂಟ್ ನಿಧಿ (ಪಿಪಿಎಫ್) ನಿಮಗೆ ಒಳ್ಳೆ ರಿಟರ್ನ್ಸ್ ಕೊಡುತ್ತದೆ. ಈ ಸ್ಕೀಂನಲ್ಲಿ ನಿಮ್ಮ ಹೂಡಿಕೆಯನ್ನು ಕೊಂಚ ದೊಡ್ಡದಾಗಿ ಪ್ಲಾನ್ ಮಾಡಿದರೆ, ನಿಮ್ಮ ಪುಟ್ಟ ಹೂಡಿಕೆಗಳನ್ನು ಸುದೀರ್ಘಾವಧಿಯ ಯೋಜನೆಯೊಂದರ ಮೂಲಕ ಕೋಟಿಯ ಮಟ್ಟದಲ್ಲಿ ಬೆಳೆಸಬಹುದಾಗಿದೆ.
ಪ್ರತಿ ದಿನ 416 ರೂಪಾಯಿ ಅಥವಾ ಪ್ರತಿ ತಿಂಗಳು ಸುಮಾರು 12,500 ರೂಪಾಯಿಯಷ್ಟನ್ನು ಹೂಡಿಕೆದಾರರು ಹೂಡಿಕೆ ಮಾಡಿದಲ್ಲಿ, ಮುಂದಿನ ಅನೇಕ ವರ್ಷಗಳಲ್ಲಿ ನೀವು ಕೋಟ್ಯಾಧೀಶರಾಗುವ ಅವಕಾಶವನ್ನು ಸರ್ಕಾರ ಕೊಡುತ್ತಿದೆ. ಸದ್ಯಕ್ಕೆ ಪಿಪಿಎಫ್ ಖಾತೆಗಳ ಮೇಲೆ 7.1% ವಾರ್ಷಿಕ ಬಡ್ಡಿಯನ್ನು ಸರ್ಕಾರ ಕೊಡುತ್ತಿದೆ.
ಮುಂದಿನ 15 ವರ್ಷಗಳ ಮಟ್ಟಿಗೆ ನೀವು 12,500 ರೂಪಾಯಿ/ತಿಂಗಳಿನಂತೆ ಹೂಡಿಕೆ ಮಾಡುತ್ತಾ ಹೋದರೆ ನಿಮಗೆ ಮೆಚ್ಯೂರಿಟಿ ಅವಧಿಯ ವೇಳೆಗೆ ಒಟ್ಟಾರೆ ಹೂಡಿಕೆ 22.5 ಲಕ್ಷ ರೂಪಾಯಿಯೊಂದಿಗೆ ಬಡ್ಡಿಯ ರೂಪದಲ್ಲಿ 18,18,209 ರೂಪಾಯಿ ಸೇರಿಕೊಂಡು ಒಟ್ಟಾರೆ 40,68,209 ರೂಪಾಯಿ ನಿಮ್ಮದಾಗುತ್ತದೆ.
ಈ ಅವಧಿ ಬಳಿಕ ನೀವು ಹಣ ಹಿಂಪಡೆಯುವ ಬದಲಿಗೆ ಇನ್ನೂ ಹತ್ತು ವರ್ಷ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದಲ್ಲಿ; ನಿಮ್ಮ ಹೂಡಿಕೆ 68,58,288 ರೂಪಾಯಿಗಳಾಗಿ, ಬಡ್ಡಿಯೂ ಸೇರಿ ಒಟ್ಟಾರೆ 1,03,08,015 ರೂಪಾಯಿ ನಿಮ್ಮದಾಗುತ್ತದೆ.