alex Certify ಗ್ರಾಹಕರೇ ಗಮನಿಸಿ: FD ಬಡ್ಡಿ ದರದಲ್ಲಿ ಬದಲಾವಣೆ ಮಾಡಿದೆ ಈ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ: FD ಬಡ್ಡಿ ದರದಲ್ಲಿ ಬದಲಾವಣೆ ಮಾಡಿದೆ ಈ ಬ್ಯಾಂಕ್

ಖಾಸಗಿ ವಲಯದ ಯೆಸ್ ಬ್ಯಾಂಕ್ ಸ್ಥಿರ ಠೇವಣಿ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಹಿರಿಯ ನಾಗರಿಕರಿಗೆ ಬ್ಯಾಂಕ್ ಶೇಕಡಾ 4 ರಿಂದ ಶೇಕಡಾ 7.5ರವರೆಗೆ ಬಡ್ಡಿದರಗಳನ್ನು ನೀಡುತ್ತಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಎಫ್‌ಡಿಗಳಿಗೆ ಈ ಬಡ್ಡಿ ದರ ಅನ್ವಯಿಸಲಿದೆ.

ಯೆಸ್ ಬ್ಯಾಂಕ್ ಎಲ್ಲ ಗ್ರಾಹಕರಿಗೆ ಕನಿಷ್ಠ 7 ದಿನಗಳಿಂದ ಗರಿಷ್ಠ 10 ವರ್ಷಗಳವರೆಗೆ ಸ್ಥಿರ ಠೇವಣಿ ಸೌಲಭ್ಯವನ್ನು ನೀಡುತ್ತದೆ. ಕೊರೊನಾ ವೈರಸ್ ನಿಂದಾಗಿ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿದರ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಇಳಿಯುತ್ತಿದೆ. ಬ್ಯಾಂಕ್ ನ ಈ ಬದಲಾವಣೆ ಎಲ್ಲಾ ಅವಧಿಯ ಠೇವಣಿಗಳ ಮೇಲೆ ಫೆಬ್ರವರಿ 8ರಿಂದ ಜಾರಿಗೆ ಬಂದಿದೆ. ಎಲ್ಲಾ ಸ್ಥಿರ ಠೇವಣಿ ಯೋಜನೆಗಳಲ್ಲಿ ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಕನಿಷ್ಠ 50 ಬೇಸಿಸ್ ಪಾಯಿಂಟ್‌ಗಳನ್ನು ಬ್ಯಾಂಕ್ ನೀಡುತ್ತಿದೆ. ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಶೇಕಡಾ 4 ರಿಂದ ಶೇಕಡಾ 7.5 ರವರೆಗೆ ಬಡ್ಡಿದರ ನೀಡುತ್ತದೆ.

7 ದಿನಗಳಿಂದ 14 ದಿನಗಳವರೆಗೆ ಶೇಕಡಾ 3.5ರಷ್ಟು ಬಡ್ಡಿ ಸಿಗುತ್ತದೆ. 15 ದಿನಗಳಿಂದ 45 ದಿನಗಳವರೆಗೆ ಶೇಕಡಾ 4, 46 ದಿನಗಳಿಂದ 90 ದಿನಗಳವರೆಗೆ ಶೇಕಡಾ 4.50 ರಷ್ಟು, 3 ತಿಂಗಳಿಂದ 6 ತಿಂಗಳ ಅವಧಿಗೆ ಶೇಕಡಾ 5ರಷ್ಟು ಬಡ್ಡಿ ಸಿಗಲಿದೆ. 6 ತಿಂಗಳಿಂದ 9 ತಿಂಗಳ ಅವಧಿಗೆ ಶೇಕಡಾ 5.50ರಷ್ಟು, 9 ತಿಂಗಳಿಂದ 1 ವರ್ಷದ ಅವಧಿಗೆ ಶೇಕಡಾ 5.75 ರಷ್ಟು,1 ವರ್ಷದಿಂದ 2 ವರ್ಷಗಳ ಅವಧಿಗೆ ಶೇಕಡಾ 6.25ರಷ್ಟು, 2 ವರ್ಷದಿಂದ 3 ವರ್ಷ ಅವಧಿಗೆ ಶೇಕಡಾ 6.50ರಷ್ಟು, 3 ವರ್ಷದಿಂದ 10 ವರ್ಷಗಳ ಅವಧಿಗೆ  ಶೇಕಡಾ 6.75ರಷ್ಟು ಬಡ್ಡಿ ಸಿಗಲಿದೆ.

ಹಿರಿಯ ನಾಗರಿಕರ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಯೋಜನೆಗಳಿಗೆ ಶೇಕಡಾ 0.5ರಷ್ಟು ಬಡ್ಡಿ ನೀಡುತ್ತದೆ. 3 ವರ್ಷಕ್ಕಿಂತ ಮೇಲ್ಪಟ್ಟ ಎಫ್ಡಿಗೆ ಶೇಕಡಾ 0.75ರಷ್ಟು ಬಡ್ಡಿ ನೀಡಲಾಗುತ್ತದೆ. 7 ರಿಂದ 14 ದಿನಗಳ ಎಫ್‌ಡಿ ಯಲ್ಲಿ ಶೇಕಡಾ 4 ಮತ್ತು 10 ವರ್ಷಗಳ ಎಫ್‌ಡಿ ಯಲ್ಲಿ ಶೇಕಡಾ 7.5ರಷ್ಟು ಬಡ್ಡಿ ಸಿಗಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...