ಹೂಡಿಕೆ ವಿಷ್ಯ ಬಂದಾಗ ಜನರು ಸ್ಥಿರ ಠೇವಣಿಗೆ ಆಸಕ್ತಿ ತೋರುತ್ತಾರೆ. ಹೂಡಿಕೆಯ ವಿಷಯದಲ್ಲಿ ಎಫ್‌ಡಿ ಉತ್ತಮ ಆಯ್ಕೆಯೆಂದು ಪರಿಗಣಿಸಲಾಗುತ್ತದೆ. ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿಯನ್ನು ಇದ್ರಲ್ಲಿ ಪಡೆಯಬಹುದು. ಅನೇಕ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಯೋಜನೆಯನ್ನು ನೀಡುತ್ತವೆ. ಕೆಲ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿಯನ್ನು ನೀಡ್ತಿವೆ.
ಯೆಸ್ ಬ್ಯಾಂಕ್ ಮತ್ತು ಡಿಸಿಬಿ ಬ್ಯಾಂಕ್‌ನಂತಹ ಕೆಲವು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಎಫ್‌ಡಿಯಲ್ಲಿ ಹೆಚ್ಚಿನ ಬಡ್ಡಿ ನೀಡುತ್ತವೆ. ಈ ಯೋಜನೆ 3 ವರ್ಷಗಳಲ್ಲಿ ಪ್ರಬುದ್ಧವಾಗುತ್ತದೆ. ಈ ಎರಡು ಬ್ಯಾಂಕುಗಳ 3 ವರ್ಷದ ಎಫ್‌ಡಿಯ ಬಡ್ಡಿದರ ಆಕರ್ಷಕವಾಗಿದೆ.
3 ವರ್ಷಗಳಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಯೆಸ್ ಬ್ಯಾಂಕ್ ಶೇಕಡಾ 7.50ರಷ್ಟು ಬಡ್ಡಿಯನ್ನು ನೀಡುತ್ತಿದೆ. ಯೆಸ್ ಬ್ಯಾಂಕಿನಲ್ಲಿ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ, 3 ವರ್ಷಗಳಲ್ಲಿ ಈ ಮೊತ್ತ 1,24,792 ರೂಪಾಯಿಯಾಗುತ್ತದೆ. ಡಿಸಿಬಿ ಬ್ಯಾಂಕ್ 3 ವರ್ಷದ ಎಫ್‌ಡಿಗೆ ಶೇಕಡಾ 7.25 ರಷ್ಟು ಬಡ್ಡಿ ನೀಡುತ್ತಿದೆ. ಅಂದರೆ 1 ಲಕ್ಷ ರೂಪಾಯಿ ಠೇವಣಿಯಿಟ್ಟರೆ 3 ವರ್ಷಗಳಲ್ಲಿ 1,24,055 ರೂಪಾಯಿ ಕೈಗೆ ಸಿಗುತ್ತದೆ.
ಆರ್‌ಬಿಎಲ್ ಬ್ಯಾಂಕ್ ಹಿರಿಯ ನಾಗರಿಕರಿಗೆ 3 ವರ್ಷಗಳಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7.10ರಷ್ಟು ಬಡ್ಡಿಯನ್ನು ನೀಡುತ್ತದೆ. ಇಂಡಸ್ಇಂಡ್ ಬ್ಯಾಂಕ್ ಶೇಕಡಾ 7 ಬಡ್ಡಿ ನೀಡಿದ್ರೆ, ಬಂಧನ್ ಬ್ಯಾಂಕ್ ಶೇಕಡಾ 6.25ರಷ್ಟು ಬಡ್ಡಿ ನೀಡುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಬಗ್ಗೆ ಹೇಳುವುದಾದ್ರೆ ಹಿರಿಯ ನಾಗರಿಕರು, ಕೆನರಾ ಬ್ಯಾಂಕ್ ನಿಂದ ಶೇಕಡಾ 6ರಷ್ಟು, ಯೂನಿಯನ್ ಬ್ಯಾಂಕ್ ನಲ್ಲಿ ಶೇಕಡಾ 6ರಷ್ಟು, ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇಕಡಾ 5.80ರಷ್ಟು, ಎಸ್‌ಬಿಐನಲ್ಲಿ ಶೇಕಡಾ 5.80ರಷ್ಟು ಬಡ್ಡಿ ಪಡೆಯುತ್ತಾರೆ.