
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯು ನವೆಂಬರ್ 1 ರಿಂದ ನೋಂದಣಿ ಪ್ರಾರಂಭವಾಗಿದ್ದು, ನೂತನ ಮಾರ್ಗಸೂಚಿಯನ್ವಯ ಮಾಸಿಕ 30,000 ರೂ. ವರೆಗಿನ ಅಥವಾ ವಾರ್ಷಿಕ 3,60,000 ರೂ. ವರೆಗಿನ ವೇತನ ಪಡೆಯುವ ಖಾಸಗಿ ನೌಕರರು ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಅಲ್ಲದೇ, ಯಶಸ್ವಿನಿ ಕಾರ್ಡ್ ಮಾಡಿಸುವ ಸಹಕಾರ ಸಂಘದ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ 20 ರೂ. ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆಯ ಸಹಕಾರ ಸಿಂಧು ವೆಬ್‍ಸೈಟ್ https://sahakarasindhu.karnataka.gov.in ಕಚೇರಿ ದೂರವಾಣಿ ಸಂಖ್ಯೆ: 0836-2958634 ಸಂಪರ್ಕಿಸಬಹುದೆಂದು ಧಾರವಾಡ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.