ಇ ಕಾಮರ್ಸ್ ಕಂಪನಿ ಎಟ್ಸಿಯ ಪ್ರೀ ಮಾರ್ಕೆಟ್ ಟ್ರೇಡ್ ಮಂಗಳವಾರ ಏಕಾಏಕಿ ಏರಿಕೆ ಕಂಡಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಒಂದು ಟ್ವೀಟ್ನಿಂದಾಗಿ ಇ ಕಾಮರ್ಸ್ ಲೋಕದಲ್ಲಿ ಈ ಸಂಚಲನ ಉಂಟಾಗಿದೆ.
ಟೆಸ್ಲಾದ ಸಿಇಓ ಎಲಾನ್ ಮಸ್ಕ್ ಟ್ವಿಟರ್ನಲ್ಲಿ ಐ ಕೈಂಡಾ ಲವ್ ಎಟ್ಸಿ ಎಂದು ಟ್ವೀಟಾಯಿಸಿದ್ದರು. ತಮ್ಮ ಶ್ವಾನಕ್ಕಾಗಿ ಕೈನಿಂದ ತಯಾರಿಸಲಾದ ಟೊಪ್ಪಿಯೊಂದರ ಫೋಟೋ ಶೇರ್ ಮಾಡಿ ಮಸ್ಕ್ ಈ ರೀತಿ ಬರೆದುಕೊಂಡಿದ್ದರು.
ಮಸ್ಕ್ರ ಈ ಟ್ವೀಟ್ ಬಳಿಕ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯೇ ಆಗಿದೆ. ಷೇರು ಮಾರುಕಟ್ಟೆಯಲ್ಲಿ ಎಟ್ಸಿ 8.6 ಪ್ರತಿಶತ ಏರಿಕೆ ಕಂಡಿದೆ. ಟ್ವೀಟಿಗರ ಒತ್ತಾಯದ ಮೇರೆಗೆ ಎಲಾನ್ ಮಸ್ಕ್ ತಮ್ಮ ಶ್ವಾನ ಈ ಟೋಪಿಯನ್ನ ಹಾಕಿಕೊಂಡಿರುವ ಫೋಟೋವನ್ನ ಶೇರ್ ಮಾಡಿದ್ದರು.
ಈ ಹಿಂದೆಯೂ ಎಲಾನ್ ಮಸ್ಕ್ ಸಿಗ್ನಲ್ ಮೆಸೆಜಿಂಗ್ ಅಪ್ಲಿಕೇಶನ್ ಬಳಕೆ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿದ್ದರು. ಇದಾದ ಬಳಿಕ ಸಿಗ್ನಲ್ ಅಪ್ಲಿಕೇಶನ್ ಮಿಲಿಯನ್ಗಟ್ಟಲೇ ಚಂದಾದಾರರನ್ನ ಪಡೆದಿತ್ತು.
https://twitter.com/PPathole/status/1354036924646789120?ref_src=twsrc%5Etfw%7Ctwcamp%5Etweetembed%7Ctwterm%5E1354040068835569664%7Ctwgr%5E&ref_url=https%3A%2F%2Fwww.ndtv.com%2Foffbeat%2Felon-musk-worlds-richest-man-bought-a-gift-for-his-dog-then-this-happened-2358546