ದಕ್ಷಿಣ ಅಮೆರಿಕದ ಹೊಸ ತೈಲೋತ್ಪನ್ನ ಉತ್ಪಾದಕ ಗಯಾನಾದಿಂದ ಮೊದಲ ತೈಲ ಸರಕು ವಿಶ್ವದ ಕಚ್ಚಾ ತೈಲ ಆಮದುದಾರ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನವನ್ನ ಪಡೆದಿರುವ ಭಾರತಕ್ಕೆ ಆಮದಾಗುತ್ತಿದೆ. ಈಗಾಗಲೇ ಗಯಾನಾದಿಂದ ತೈಲ ಸರಕು ರಫ್ತಾಗಿದೆ ಎಂದು ರಿಫಿನಿಟಿವ್ ಐಕಾನ್ ಡೇಟಾವು ಮಾಹಿತಿ ನೀಡಿದೆ.
ಮಧ್ಯಪ್ರಾಚ್ಯ ದೇಶಗಳ ಮೇಲಿನ ಕಚ್ಚಾ ವಸ್ತುಗಳ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಭಾರತ ರಿಫೈನರ್ಗಳಿಗೆ ಕಚ್ಚಾ ವಸ್ತುಗಳ ವೈವಿಧ್ಯೀಕರಣವನ್ನ ವೇಗಗೊಳಿಸುವಂತೆ ಹೇಳಿದೆ ಎನ್ನಲಾಗಿದೆ.
ಒಪೆಕ್ನ ಸದಸ್ಯ ರಾಷ್ಟ್ರಗಳಿಂದ ಭಾರತಕ್ಕೆ ತೈಲ ಆಮದು ಏಪ್ರಿಲ್ 2020ರಿಂದ ಜನವರಿ 2021ರ ನಡುವೆ ಐತಿಹಾಸಿಕ ಮಟ್ಟಕ್ಕೆ ಕುಸಿತ ಕಂಡಿದೆ. ಹೀಗಾಗಿ ಗಯಾನೀಸ್ನಿಂದ ಕಚ್ಛಾತೈಲಗಳನ್ನ ಆಮದು ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ರಷ್ಯಾ ನಡುವಿನ ಪ್ರಮುಖ ಒಪ್ಪಂದವನ್ನ ನವೀಕರಿಸುವ ಮೂಲಕ ಈ ಕ್ರಮ ಕೈಗೊಳ್ಳಲಾಗಿದೆ.
ಗಯಾನಾದಿಂದ 1 ಮಿಲಿಯನ್ ಬ್ಯಾರಲ್ ಕಚ್ಚಾತೈಲ ಮಾರ್ಚ್ 2ರಂದು ಭಾರತ ಮುಂದ್ರಾ ಬಂದರಿನತ್ತ ಹೊರಟಿದೆ. ಭಾರತಕ್ಕೆ ಈ ಕಚ್ಚಾ ತೈಲ ಏಪ್ರಿಲ್ 8ರ ಸುಮಾರಿಗೆ ಬರಲಿದೆ ಎಂದು ರಿಫಿನಿಟಿವ್ ಐಕಾನ್ ಡೇಟಾ ಹೇಳಿದೆ.