ನವದೆಹಲಿ: ವಿಶ್ವದ ವಿವಿಧ ದೇಶಗಳ ಪಾಸ್ ಪೋರ್ಟ್ ಗಳ ಮೌಲ್ಯಾಂಕನ ನೀಡುವ ಹೆನ್ಲಿ ಪಾಸ್ ಪೋರ್ಟ್ ಇಂಡೆಕ್ಸ್ 2021 ಕ್ಕೆ ಸಂಬಂಧಿಸಿದಂತೆ ವಿಶ್ವದ ಪ್ರಭಾವಿ ಪಾಸ್ ಪೋರ್ಟ್ ಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಭಾರತಕ್ಕೆ 85 ನೇ ಸ್ಥಾನ ಲಭಿಸಿದೆ.
ಸಿಂಗಾಪುರ್ ಜತೆ ಸೇರಿ ಜಪಾನ್ ದೇಶ 191 ಪ್ರದೇಶಗಳಿಗೆ ವೀಸಾ ಇಲ್ಲದೇ ಪ್ರಯಾಣಿಸಬಹುದಾಗಿದೆ. ಅಲ್ಲದೆ ವೀಸಾ ಆನ್ ಎರೈವಲ್ ವ್ಯವಸ್ಥೆ ಹೊಂದಿದ್ದು, ಪಾಸ್ ಪೋರ್ಟ್ ಮೌಲ್ಯಾಂಕನದಲ್ಲಿ 190 ಅಂಕ ಪಡೆದಿದೆ. ವಿಶ್ವದ ಅತಿ ಪ್ರಭಾವಿ ಹಾಗೂ ಸ್ನೇಹಪರ ಪಾಸ್ ಪೋರ್ಟ್ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಕ್ಷಿಣ ಕೋರಿಯಾ ಹಾಗೂ ಜರ್ಮನಿ ದೇಶಗಳು 189 ಮೌಲ್ಯಾಂಕ ಪಡೆದಿದ್ದು, ಎರಡನೇ ಸ್ಥಾನದಲ್ಲಿವೆ. ಭಾರತದಿಂದ 58 ಪ್ರದೇಶಗಳಿಗೆ ವೀಸಾ ಇಲ್ಲದೇ ಸಾಗಬಹುದಾಗಿದ್ದು, ವಿಶ್ವದ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತಕ್ಕೆ 85 ನೇ ಸ್ಥಾನ ಲಭಿಸಿದೆ.