alex Certify ಕೇಳಿದರೆ ಈ ಹ್ಯಾಂಡ್ ಬ್ಯಾಗ್ ಬೆಲೆ ತಿರುಗುತ್ತೆ ತಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಳಿದರೆ ಈ ಹ್ಯಾಂಡ್ ಬ್ಯಾಗ್ ಬೆಲೆ ತಿರುಗುತ್ತೆ ತಲೆ…!

ಇಟಾಲಿಯನ್​ ಐಷಾರಾಮಿ ಬ್ರ್ಯಾಂಡ್​ಗಳಲ್ಲೊಂದಾದ ಬೋರಿನಿ ಮಿಲನೇಸಿ 52 ಕೋಟಿ ರೂಪಾಯಿ ಮೌಲ್ಯದ ವಿಶೇಷವಾದ ಅತ್ಯಂತ ದುಬಾರಿ ಮೌಲ್ಯದ ಹ್ಯಾಂಡ್​ ಬ್ಯಾಗ್​ನ್ನ ಅನಾವರಣಗೊಳಿಸಿದೆ.

ಬೊಲೊಗ್ನಾ ಮೂಲದ ಈ ಬ್ರ್ಯಾಂಡ್​ ಕೇವಲ ಮೂರು ಐಷಾರಾಮಿ ಪರ್ವಾ ಮೀ ಬ್ಯಾಗ್​ಗಳನ್ನ ಉತ್ಪಾದನೆ ಮಾಡುತ್ತೆ.

ಪ್ರತಿ ಚೀಲವನ್ನ ತಯಾರಿಸಲು 1 ಸಾವಿರ ಗಂಟೆಗಳ ಸಮಯ ಬೇಕಾಗುತ್ತೆ ಅಂತಾ ವರದಿಗಳು ಹೇಳಿವೆ, ಇನ್ನು ತಮ್ಮ ದುಬಾರಿ ಬ್ಯಾಗ್​​ ಬಗ್ಗೆ ಇನ್ಸ್​​ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಈ ಕಂಪನಿ, ಬ್ಯಾಗ್​ ಮಾರಾಟ ಮೊತ್ತದ ಒಂದು ಭಾಗವನ್ನ ಸಮುದ್ರಗಳನ್ನ ಸ್ವಚ್ಛಗೊಳಿಸಲು ದೇಣಿಗೆ ನೀಡಲಾಗುವುದು ಎಂದು ಹೇಳಿದೆ.

ಈ ಬ್ಯಾಗ್​ನ್ನ ಅನಾವರಣಗೊಳಿಸುತ್ತಿರೋದಕ್ಕೆ ಹೆಮ್ಮೆಯಾಗುತ್ತಿದೆ. ಸಮುದ್ರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಬ್ಯಾಗ್​​ಗಳ ಮಾರಾಟದಿಂದ ಬಂದ ಆದಾಯದಲ್ಲಿ 800 ಸಾವಿರ ಯುರೋಗಳನ್ನ ಸಮುದ್ರ ಸ್ವಚ್ಛತೆಗೆ ನೀಡಲಿದ್ದೇವೆ ಎಂದು ಕಂಪನಿ ಹೇಳಿದೆ.

ಮೊಸಳೆ ಚರ್ಮದಿಂದ ಮಾಡಲ್ಪಟ್ಟಿರುವ ಈ ಬ್ಯಾಗ್​ ಸ್ವಲ್ಪ ಪ್ರಮಾಣದಲ್ಲಿ ಹೊಳಪನ್ನ ಹೊಂದಿದೆ. ಈ ಬ್ಯಾಗ್​ ಮೇಲೆ ಚಿನ್ನದ ಚಿಟ್ಟೆಗಳನ್ನ ಇರಿಸಲಾಗಿದ್ದು, ಡೈಮಂಡ್​ಗಳಿಂದ ಅದರ ರೆಕ್ಕೆಗಳನ್ನ ಅಲಂಕರಿಸಲಾಗಿದೆ.

https://www.instagram.com/p/CIDwFxZqM77/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...