alex Certify ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ 8 ಗಂಟೆ ಮೇಲ್ಪಟ್ಟ ಕೆಲಸದ ಅವಧಿಗೆ ನಿಗದಿಯಾಗಲಿದೆ ದುಪ್ಪಟ್ಟು ವೇತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ 8 ಗಂಟೆ ಮೇಲ್ಪಟ್ಟ ಕೆಲಸದ ಅವಧಿಗೆ ನಿಗದಿಯಾಗಲಿದೆ ದುಪ್ಪಟ್ಟು ವೇತನ

ನೂತನ ವೇತನ ಕಾಯಿದೆ ಜಾರಿಗೆ ಬರಲಿದ್ದು, ನೌಕರರಿಗೆ ಪ್ರತಿನಿತ್ಯದ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಿ, ಅದರ ಮೇಲೆ ಕೆಲಸ ಮಾಡುವ ಪ್ರತಿಯೊಂದು ಗಂಟೆಗೂ ಎಂದಿನ ವೇತನದ ದುಪ್ಪಟ್ಟು ಮೊತ್ತವನ್ನು ಓವರ್‌ ಟೈಂ ಪೇ ಆಗಿ ಕೊಡಬೇಕು ಎಂದು ನಿಯಮ ಇರಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಪ್ರತಿನಿತ್ಯ 12 ಗಂಟೆಗಳವರೆಗೂ ಕೆಲಸ ಮಾಡುವ ಅವಕಾಶ ಕೊಡಮಾಡಿ, ಎಂಟು ಗಂಟೆ ಮೇಲ್ಪಟ್ಟ ಕೆಲಸಕ್ಕೆ ಓವರ್‌ಟೈಂ ಕೊಡಬೇಕಾದ ನಿಯಮ ತರುವ ಸಾಧ್ಯತೆಗಳು ಇವೆ.

ವರದಿಗಳ ಪ್ರಕಾರ, ಎಂದಿನ ಕೆಲಸದ ಅವಧಿಯ ಮೇಲೆ 15-30 ನಿಮಿಷಗಳ ಅವಧಿಗೆ ಕೆಲಸ ಮಾಡಿದಲ್ಲಿ, ಅದನ್ನು ಅರ್ಧ ಗಂಟೆ ಓಟಿ ಎಂದು ಪರಿಗಣಿಸಬೇಕೆಂದು ಹೊಸ ವೇತನ ನಿಯಮವು ತಿಳಿಸುತ್ತದೆ.

2019ರ ಆಗಸ್ಟ್‌ನಲ್ಲಿ ರಾಜ್ಯಸಭೆಯಲ್ಲಿ ವೇತನದ ನಿಯಮಾವಳಿಯ ಮಸೂದೆಗೆ ಅಂಗೀಕಾರ ನೀಡಲಾಗಿತ್ತು. ಇದೇ ಮಸೂದೆಗೆ 2019ರ ಜುಲೈನಲ್ಲಿ ಲೋಕಸಭೆಯಲ್ಲಿ ಅಂಗೀಕಾರ ನೀಡಲಾಗಿತ್ತು. ಈ ಮಸೂದೆಯು ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಕಾನೂನಾಗಿ ಮಾರ್ಪಾಡಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...