ನವದೆಹಲಿ: ಕಡಿಮೆ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ವಿಶ್ವದ ಪ್ರಮುಖ ಸಂಸ್ಥೆಯಾದ ಗೂಗಲ್ ಮತ್ತು ಭಾರತದ ಟೆಲಿಕಾಂ ವಲಯದ ದಿಗ್ಗಜ ಕಂಪನಿ ರಿಲಯನ್ಸ್ ಜೊತೆ ಕೈ ಜೋಡಿಸಿದ್ದು ಶೀಘ್ರವೇ ಕೈಗೆಟುಕುವ ದರದಲ್ಲಿ ಸ್ಮಾರ್ಟ್ಫೋನ್ ಅಭಿವೃದ್ಧಿಪಡಿಸಲಾಗುತ್ತದೆ.
ಗೂಗಲ್ ಸಿಇಓ ಸುಂದರ್ ಪಿಚೈ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಿಲಯನ್ಸ್ ಜೊತೆಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡಿದ್ದು, ಜಂಟಿಯಾಗಿ ಕಡಿಮೆ ದರದ ಸ್ಮಾರ್ಟ್ಫೋನ್ ಅಭಿವೃದ್ಧಿಪಡಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಗೂಗಲ್ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್ ಹೆಸರಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿತ್ತು. ಇದರ ಭಾಗವಾಗಿ ಈಗ ಇವೆರಡು ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿದ್ದು, ಕೈಗೆಟಕುವ ದರದಲ್ಲಿ ಸ್ಮಾರ್ಟ್ಫೋನ್ ಅಭಿವೃದ್ಧಿಪಡಿಸಲಿವೆ. ಈ ಫೋನ್ ಗಳು ಯಾವಾಗ ಮಾರುಕಟ್ಟೆಗೆ ಬರಲಿವೆ. ದರ ಎಷ್ಟು ಇರಲಿದೆ ಎಂಬುದರ ಬಗ್ಗೆ ರಹಸ್ಯವಾಗಿಡಲಾಗಿದೆ.