ನವದೆಹಲಿ: ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಬಗ್ಗೆ ವಿಳಂಬ ನೀತಿ ಅನುಸರಿಸುವ ಉದ್ದೇಶವಿಲ್ಲ ಎಂದು ಕಾರ್ಮಿಕ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
ಕನಿಷ್ಠ ವೇತನ ನಿಗದಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿಗೆ ಮೂರು ವರ್ಷದ ಕಾಲಾವಕಾಶ ನೀಡುವ ಮೂಲಕ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಹೇಳಲಾಗಿತ್ತು. ಆದರೆ, ವಿಳಂಬದ ಉದ್ದೇಶದಿಂದ ಮೂರು ವರ್ಷದ ಗಡುವು ನೀಡಿಲ್ಲ. ಅದಕ್ಕಿಂತ ಮೊದಲೇ ಶಿಫಾರಸು ಸಲ್ಲಿಕೆಯಾಗಲಿದೆ. ಶಿಫಾರಸು ಜಾರಿಗೊಳಿಸಲಾದ ನಂತರವೂ ಅಗತ್ಯ ತಾಂತ್ರಿಕ ಸಲಹೆಗಳನ್ನು ಪಡೆಯಲು ಸಾಧ್ಯವಿದೆ ಎಂದು ತಿಳಿಸಲಾಗಿದೆ.