
ನವದೆಹಲಿ: ಟಿಸಿಎಸ್ ನೌಕರರಿಗೆ ನವೆಂಬರ್ 15 ರಿಂದ ಕಚೇರಿಯಲ್ಲೇ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ.
ಕೊರೋನಾ ಕಡಿಮೆಯಾದ ನಂತರ ಅನೇಕ ಕಾರ್ಪೊರೇಟ್ ಹಾಗೂ ಐಟಿ ಕಂಪನಿಗಳು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವಂತೆ ನೌಕರರಿಗೆ ಸೂಚನೆ ನೀಡಿವೆ. ನವೆಂಬರ್ 15 ರಿಂದ ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತೆ ನೌಕರರಿಗೆ ಡಿಸಿಎಸ್ ತಿಳಿಸಿದೆ.
ಕೆಲ ತಿಂಗಳಿನಿಂದ ಶೇಕಡ 25ರಷ್ಟು ನೌಕರರು ಟಿಸಿಎಸ್ ಕಚೇರಿಯಲ್ಲಿ ಕೆಲಸ ಮಾಡಬೇಕು. ಶೇಕಡ 25 ಕ್ಕಿಂತ ಹೆಚ್ಚಿನ ಸಮಯವನ್ನು ಯಾವುದೇ ಕೆಲಸಗಾರರು ಕಚೇರಿಯಲ್ಲಿ ಕಳೆಯಬಾರದು ಎನ್ನುವ ನಿಯಮ ರೂಪಿಸಿದ್ದ ಟಿಸಿಎಸ್ ಕೊರೋನಾ ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲಾ ನೌಕರರು ನವೆಂಬರ್ 15 ರಿಂದ ಕಚೇರಿಗೆ ಬರುವಂತೆ ಸೂಚನೆ ನೀಡಿದೆ.