ಮಧ್ಯಮ ವರ್ಗದ ಜನರು ಸಾಮಾನ್ಯವಾಗಿ ವ್ಯಾಪಾರಕ್ಕಿಂತ ಉದ್ಯೋಗಕ್ಕೆ ಹೆಚ್ಚಿನ ಒಲವು ತೋರಿಸ್ತಾರೆ. ಆದ್ರೆ ಸಿಗುವ ಸಂಬಳ ಅವ್ರ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅಂತವರಿಗೆ ಆನ್ ಲೈನ್ ನಲ್ಲಿ ಗಳಿಕೆಗೆ ಸಾಕಷ್ಟು ಅವಕಾಶಗಳಿವೆ.
Shutterstock : ಈ ವೆಬ್ ಸೈಟ್ ನಿಂದ ಜನರು ಫೋಟೋ ಖರೀದಿ ಮಾಡ್ತಾರೆ. ನಿಮಗೆ ಫೋಟೋಗ್ರಫಿಯಲ್ಲಿ ಆಸಕ್ತಿಯಿದ್ದರೆ ನೀವು ಕ್ಲಿಕ್ಕಿಸಿದ ಫೋಟೋಗಳನ್ನು ಇಲ್ಲಿ ಅಪ್ಲೋಡ್ ಮಾಡಬಹುದು. ನಿಮ್ಮ ಫೋಟೋವನ್ನು ಡೌನ್ಲೋಡ್ ಮಾಡ್ತಿದ್ದಂತೆ ನಿಮಗೆ ಹಣ ಸಿಗುತ್ತದೆ.
Udemy : ಇದು ಯುಟ್ಯೂಬ್ ನಂತೆಯೇ ಕೆಲಸ ಮಾಡುತ್ತದೆ. ಇಲ್ಲಿ ವಿಡಿಯೋ ಅಪ್ಲೋಡ್ ಮಾಡಬಹುದು. ಒಳ್ಳೊಳ್ಳೆ ಮಾಹಿತಿ ನೀಡುವ ವಿಡಿಯೋಗಳಿಗೆ ಇಲ್ಲಿ ಅವಕಾಶ. ಈ ವಿಡಿಯೋಗಳನ್ನು ಜನರು ಹಣ ನೀಡಿ ನೋಡುತ್ತಾರೆ. ಈ ಮೂಲಕ ನೀವು ಗಳಿಸಬಹುದು.
Amazon : ಅಮೆಜಾನ್ ನ ವಸ್ತುಗಳ ಲಿಂಕನ್ನು ನೀವು ಬೇರೆ ವೆಬ್ ಸೈಟ್ ಗಳಲ್ಲಿ ಹಂಚಿಕೊಳ್ಳಬೇಕು. ನೀವು ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಯಾರಾದ್ರೂ ವಸ್ತುಗಳನ್ನು ಖರೀದಿ ಮಾಡಿದ್ರೆ ನಿಮಗೆ ಹಣ ಸಿಗುತ್ತದೆ.
YouTube : ಯುಟ್ಯೂಬ್ ಗಳಿಕೆ ಬಗ್ಗೆ ಬಹುತೇಕರಿಗೆ ತಿಳಿದಿದೆ. ಚಾನೆಲ್ ಶುರು ಮಾಡಿ ಇದ್ರಲ್ಲಿ ಹಣ ಗಳಿಸಬಹುದು. ನಿಮ್ಮ ಚಾನೆಲ್ ಗೆ 1000 ಚಂದಾದಾರರು ಹಾಗೂ 4000 ಗಂಟೆಗಳ ವಿಡಿಯೋ ವೀಕ್ಷಣೆ ಮಾಡಿದ ನಂತ್ರ ನಿಮ್ಮ ವಿಡಿಯೋಕ್ಕೆ ಜಾಹೀರಾತು ಲಿಂಕ್ ಮಾಡಲಾಗುತ್ತದೆ. ಅದ್ರ ಮೂಲಕ ನಿಮಗೆ ಹಣ ಸಿಗುತ್ತದೆ.