ನವದೆಹಲಿ: ವರ್ಕ್ ಫ್ರಮ್ ಹೋಮ್ ಕಾಯಂಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಕಾಯಂಗೊಳಿಸಲು ಅನುಕೂಲವಾಗುವಂತಹ ಕ್ರಮಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಇತರೆ ಸೇವೆಗಳ ಪೂರೈಕೆದಾರ ಅಡಿಯಲ್ಲಿ ಐಟಿ, ಬಿಪಿಒ ವಲಯಕ್ಕೆ ಸಹಕಾರಿಯಾಗುವಂತಹ ತೀರ್ಮಾನ ಕೈಗೊಳ್ಳಲಾಗಿದೆ. ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮತ್ತು ಎಲ್ಲಾದರೂ ಕೆಲಸ ನಿರ್ವಹಿಸುವ ಪದ್ಧತಿ ಜಾರಿಗೆ ನೋಂದಣಿ ಮತ್ತು ಪರವಾನಿಗೆ ಅಗತ್ಯವಾಗಿದ್ದು, ನೋಂದಣಿ ಅಗತ್ಯವನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.