ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇದು ವರ್ಕ್ ಫ್ರಂ ಹೋಮ್ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿದೆ. ಕೊರೊನಾ ಸೋಂಕು ಕಡಿಮೆಯಾಗ್ತಿದ್ದಂತೆ ಅನೇಕ ಕಚೇರಿಗಳಲ್ಲಿ ಕೆಲಸ ಪುನರಾರಂಭವಾಗಿತ್ತು. ಆದ್ರೆ ಕೊರೊನಾ ಮತ್ತೆ ಹೆಚ್ಚಾಗ್ತಿದ್ದಂತೆ ಮನೆಯಿಂದಲೇ ಕೆಲಸ ಮಾಡುವಂತೆ ಕಂಪನಿಗಳು ಸೂಚಿಸುತ್ತಿವೆ.
ಕಚೇರಿಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆ. ಪಾರ್ಲೆ ಪ್ರಾಡಕ್ಟ್ಸ್, ಟಾಟಾ ಮೋಟಾರ್ಸ್, ಮಹೀಂದ್ರಾ ಆಂಡ್ ಮಹೀಂದ್ರಾ, ಕೇಟ್ ಮತ್ತು ಆಕ್ಸಿಸ್ ಬ್ಯಾಂಕ್ ಮುಂತಾದ ಕೆಲವು ಕಂಪನಿಗಳು ಮನೆಯಿಂದ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿವೆ. ಈ ಕಂಪನಿಗಳು, ಉದ್ಯೋಗಿಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿವೆ.
ಕಂಪನಿಗಳು ಶೇಕಡಾ 50ರಷ್ಟು ಉದ್ಯೋಗಿಗಳನ್ನು ಕಚೇರಿಗೆ ಕರೆಯಿಸಿಕೊಳ್ತಿವೆ. ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಮಾಸ್ಕ್ ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಖಾಸಗಿ ವಾಹನವನ್ನು ಹೆಚ್ಚು ಅವಲಂಭಿಸುವಂತೆ ಸೂಚನೆ ನೀಡಲಾಗಿದೆ. ಕೊರೊನಾ ಪ್ರಕರಣ ಕಡಿಮೆಯಾಗಿದ್ದ ಸಂದರ್ಭದಲ್ಲಿ ಪ್ಯಾನಸೋನಿಕ್ ಕಂಪನಿಯಲ್ಲಿ ಶೇಕಡಾ 70ರಷ್ಟು ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡ್ತಿದ್ದರು. ಈಗ ಈ ಸಂಖ್ಯೆಯನ್ನು ಶೇಕಡಾ 50ಕ್ಕೆ ಇಳಿಸಲಾಗಿದೆ.