ಮಹಿಳೆಯೊಬ್ಬರು 60 ವರ್ಷಗಳ ನಂತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಯಲ್ಲಿದ್ದ 252 ರೂ. ಬರೋಬ್ಬರಿ 25,200 ರೂ. ಆಗಿರುವುದು ಗೊತ್ತಾಗಿದೆ.
ಸುಮಾರು 60 ವರ್ಷಗಳಿಂದ ಬಳಸದ ಬ್ಯಾಂಕ್ ಖಾತೆಯನ್ನು ಮರುಶೋಧಿಸಿದ ಸ್ಕಾಟಿಷ್ ಮಹಿಳೆಯೊಬ್ಬರು 2.50 ಪೌಂಡ್(252 ರೂ.) ಬ್ಯಾಲೆನ್ಸ್ 250 ಪೌಂಡ್(25,200 ರೂ.) ಆಗಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.
ಕರೋಲ್ ಆಲಿಸನ್(74) ಅವರು ಆರನೇ ವಯಸ್ಸಿನಲ್ಲಿ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಾಗ ಪ್ರತಿ ವಾರ ತನ್ನ ಬ್ಯಾಂಕ್ ಖಾತೆಗೆ ಶಿಲ್ಲಿಂಗ್(ಈಗ ಒಂದು ಪೆನ್ಸ್ ಮೌಲ್ಯ) ಜಮಾ ಮಾಡುತ್ತಿದ್ದರು. ಪಾಕೆಟ್ ಹಣವನ್ನು ಟ್ರಸ್ಟಿ ಸೇವಿಂಗ್ಸ್ ಬ್ಯಾಂಕ್ನಲ್ಲಿ ಠೇವಣಿ ಮಾಡಲಾಯಿತು. ಅದು ನಂತರ TSB ಆಯಿತು.
ಆರು ದಶಕಗಳ ನಂತರ, ಅವಳು ತನ್ನ ಮನೆಯನ್ನು ಸ್ವಚ್ಛಗೊಳಿಸುವಾಗ ಮರೆತುಹೋದ ಖಾತೆಯ ಬ್ಯಾಂಕ್ ಪಾಸ್ ಪುಸ್ತಕ ಕಂಡು ಬಂದಿದೆ. ಅವಳು ಬ್ಯಾಂಕ್ ಗೆ ಭೇಟಿ ನೀಡಿದಾಗ, ಅವಳು ಠೇವಣಿ ಮಾಡಿದ £ 2.50 ಈಗ £ 250 ಮೌಲ್ಯದ್ದಾಗಿದೆ ಎಂದು ಅವಳು ಕಂಡುಕೊಂಡಳು.
UK ಯಲ್ಲಿ 15 ವರ್ಷಗಳವರೆಗೆ ಖಾತೆಯನ್ನು ಬಳಸದೇ ಇದ್ದಾಗ, ಹಣವನ್ನು ರಿಕ್ಲೈಮ್ ಫಂಡ್ಗೆ ಕಳುಹಿಸಲಾಗುತ್ತದೆ. ಯುಕೆಯಲ್ಲಿ ಸುಮಾರು 35 ಬ್ಯಾಂಕ್ ಗಳು ರಿಕ್ಲೈಮ್ ಫಂಡ್ಗೆ ಸಹಿ ಹಾಕಿವೆ.
ಕರೋಲ್ ಖಾತೆಯಿಂದ ಹಣ ಹಿಂಪಡೆಯಬಹುದು
ಕರೋಲ್ ಆಲಿಸನ್ BBCಯೊಂದಿಗೆ ಮಾತನಾಡಿ, ಬ್ಯಾಂಕ್ ನಲ್ಲಿರುವ ದೊಡ್ಡ ಹೊಳೆಯುವ ಮರದ ಕೌಂಟರ್ ಮತ್ತು ಅಜ್ಜಿ ನಮ್ಮನ್ನು ಟೆಲ್ಲರ್ಗೆ ಪರಿಚಯಿಸಿದ್ದು ನನಗೆ ನೆನಪಿದೆ. ಅವರು ಪುಸ್ತಕದಲ್ಲಿ ಕೈಯಿಂದ ಬರೆದುಕೊಡುತ್ತಿದ್ದರು. ಹಣ ಕಟ್ಟಿದ ನಂತರ ನಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಮತ್ತೆ ಅಜ್ಜಿಗೆ ಹಿಂತಿರುಗಿಸುತ್ತಿದ್ದೆ. 1969 ರಲ್ಲಿ ತನ್ನ ಅಜ್ಜಿ ತೀರಿಕೊಂಡಾಗ ಕರೋಲ್ ಬ್ಯಾಂಕ್ ಪುಸ್ತಕವನ್ನು ನಾನು ಸ್ವೀಕರಿಸಿದ್ದರೂ, ನಂತರ ಅದು ಮರೆತುಹೋಗಿತ್ತು ಎಂದು ಹೇಳಿದ್ದಾರೆ.