
ನವದೆಹಲಿ: ನಗದು ಹಿಂತೆಗೆತ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಆಗಸ್ಟ್ ನಲ್ಲಿ ಎಟಿಎಂಗಳಿಂದ ನಗದು ವಿತ್ ಡ್ರಾ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.
ಎಟಿಎಂ ಬಳಕೆದಾರರು ಸರಾಸರಿ 5 ಸಾವಿರ ರೂಪಾಯಿಗಳಂತೆ ಹಣ ವಿತ್ ಡ್ರಾ ಮಾಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಒಟ್ಟು 26 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿತ್ತು. ಆಗಸ್ಟ್ ನಲ್ಲಿ ಎಟಿಎಂಗಳಿಂದ ನಗದು ಹಿಂತೆಗೆತ ಸರಾಸರಿ 4969 ರೂ., ಯುಪಿಐ ಪೇಮೆಂಟ್ ಗಳ ಸರಾಸರಿ 1850 ರೂಪಾಯಿ ಇದ್ದು, ಡಿಜಿಟಲ್ ಪೇಮೆಂಟ್, ಯುಪಿಐ ಹೊರತಾಗಿಯೂ ನಗದು ಚಲಾವಣೆ ಹೆಚ್ಚಿನ ಪ್ರಮಾಣದಲ್ಲಿ ಇದೆ.
ಕಳೆದ ನವೆಂಬರ್ ನಿಂದ ನಗದು ವಿತ್ ಡ್ರಾ ಪ್ರಮಾಣ ಶೇಕಡ 10 ರಷ್ಟು ಹೆಚ್ಚಾಗಿದ್ದು, ಯುಪಿಐ ಪೇಮೆಂಟ್ ಶೇಕಡ 20 ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ನಗದು ವ್ಯವಹಾರವೇ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಎಟಿಎಂಗಳು ಹಣಕಾಸು ವರ್ಗಾವಣೆಗೆ ಮುಖ್ಯವಾದ ಸೌಲಭ್ಯಗಳಾಗಿವೆ. ಪ್ರಸ್ತುತ ಜನ ಸಣ್ಣ ಮೊತ್ತಕ್ಕೆ ಎಟಿಎಂ ಬಳಸುವುದಿಲ್ಲ. ದೊಡ್ಡ ಮೊತ್ತಕ್ಕಾಗಿ ಎಟಿಎಂ ಬಳಸುತ್ತಿದ್ದಾರೆ. ಸಣ್ಣಪುಟ್ಟ ವ್ಯವಹಾರಗಳನ್ನು ಡಿಜಿಟಲ್ ಪೇಮೆಂಟ್ ಮೂಲಕವೇ ಮಾಡುತ್ತಾರೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.