ತಮ್ಮ ಅಜ್ಜಿ ಡಾ. ಗುಲ್ಬಾನೂ ಪ್ರೇಮ್‌ಜೀರನ್ನು ಸ್ಮರಿಸಿದ ವಿಪ್ರೋ ಚೇರ್ಮನ್ ರಿಶದ್ ಪ್ರೇಮ್‌ಜೀ ಹಳೆಯ ಚಿತ್ರವೊಂದನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗುಲ್ಬಾನೂ ಪ್ರೇಮ್‌ಜೀ ಅವರು 1966-1983ರ ಅವಧಿಯಲ್ಲಿ ವಿಪ್ರೋ ಚೇರ್ಮನ್ ಆಗಿದ್ದರು.
ತಮ್ಮ ತಂದೆ ಅಜೀಂ ಪ್ರೇಂಜಿಗೆ ದೊಡ್ಡ ಬೆಂಬಲವಾಗಿ ನಮ್ಮ ಅಜ್ಜಿ ಇದ್ದರು ಎಂದು ಹೇಳಿರುವ ರಿಶದ್, ತಾವು ಕಂಡ ಅತ್ಯಂತ ಧಾರಾಳ ವ್ಯಕ್ತಿ ಎಂದರೆ ಆಕೆಯೇ ಎಂದು ಹೇಳಿಕೊಂಡಿದ್ದು, ಅವರ ಆದರ್ಶಗಳ ತಳಹದಿಯಲ್ಲೇ ವಿಪ್ರೋ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದಿದ್ದಾರೆ.