ಈ ಬಾರಿಯ ಚಳಿಗಾಲದಲ್ಲಿ ದೇಶೀ ವಿಮಾನಯಾನದ ಟೈಂ ಟೇಬಲ್ ಬಿಡುಗಡೆ ಮಾಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ಈ ಬಾರಿ 44%ದಷ್ಟು ಕಡಿಮೆ ಫ್ಲೈಟ್‌ಗಳ ಸಂಚಾರವಿರಲಿದೆ.
2020-21ರ ಚಳಿಗಾಲದಲ್ಲಿ ದೇಶದ 95 ವಿಮಾನ ನಿಲ್ದಾಣಗಳಿಂದ 12,983 ದೇಶೀ ವಿಮಾನಗಳ ಫ್ಲೈಟ್‌ಗಳ ಸಂಚಾರವಿರಲಿದೆ. 2019-20ರ ಚಳಿಗಾಲದಲ್ಲಿ ಒಟ್ಟಾರೆ 23,307 ಫ್ಲೈಟ್‌ಗಳು ದೇಶೀ ಮಾರ್ಗಗಳಲ್ಲಿ ಸಂಚಾರ ನಡೆಸಿದ್ದವು.
ಅತಿ ಹೆಚ್ಚು ಫ್ಲೈಟ್‌ಗಳ ಸೇವೆ ನೀಡಲಿರುವ ಇಂಡಿಗೋ ಸಂಸ್ಥೆಯು 6006 ಫ್ಲೈಟ್‌ಗಳನ್ನು ಓಡಿಸಲಿದ್ದರೆ, ನಂತರದ ಸ್ಥಾನದಲ್ಲಿರುವ ಸ್ಪೈಸ್ ಜೆಟ್ ಹಾಗೂ ಏರ್ ಇಂಡಿಯಾಗಳು ಕ್ರಮವಾಗಿ 1957 ಹಾಗೂ 1126 ಫ್ಲೈಟ್‌ಗಳನ್ನು ಆಗಸಕ್ಕೆ ಬಿಡಲಿವೆ.
ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ದೇಶೀ ವಿಮಾನಯಾನವನ್ನು ಮಾರ್ಚ್ 25ರಂದು ರದ್ದು ಮಾಡಲಾಗಿತ್ತು. ಮೇ 25ರಿಂದ ದೇಶಿ ವಿಮಾನಯಾನ ಸಂಚಾರಕ್ಕೆ ಮರುಚಾಲನೆ ಕೊಡಲಾಗಿತ್ತು.