ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಮಾರುಕಟ್ಟೆಯಿಂದ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ 1,000 ರೂಪಾಯಿ ನೋಟುಗಳು ಮರಳಿ ಬರಲಿವೆ.
ಈ ವಿಷಯದ ಕುರಿತು ಮಾತನಾಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಚಲಾವಣೆಯಿಂದ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಆದೇಶದ ನಂತರ ಆರ್‌ಬಿಐ 1,000 ರೂ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ನವೆಂಬರ್ 2016 ರಲ್ಲಿ 500 ಮತ್ತು 1,000 ರೂಪಾಯಿ ನೋಟುಗಳನ್ನು ನಿಷೇಧಿಸಿದಾಗ ಮೋದಿ ಸರ್ಕಾರದ ಡಿಮಾನಿಟೈಸೇಶನ್ ಕ್ರಮದ ನಂತರ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು.
ಆರ್‌ಬಿಐ ಗವರ್ನರ್ ಈಗ ಅಂತಹ ಯಾವುದೇ ಪ್ರಸ್ತಾಪವಿಲ್ಲದ ಕಾರಣ ಇವು ಊಹಾಪೋಹದ ವರದಿಗಳಾಗಿವೆ ಎಂದು ಹೇಳಿದರು.
2023 ರ ಸೆಪ್ಟೆಂಬರ್ 30 ರೊಳಗೆ ಹೆಚ್ಚಿನ 2,000 ರೂ. ನೋಟುಗಳು ಬ್ಯಾಂಕ್‌ಗಳಿಗೆ ಹಿಂತಿರುಗುತ್ತವೆ ಮತ್ತು ಠೇವಣಿ / ವಿನಿಮಯಕ್ಕಾಗಿ ಜನರು ಬ್ಯಾಂಕ್‌ಗಳಿಗೆ ಧಾವಿಸಬಾರದು ಎಂದು ಹೇಳಿದ್ದಾರೆ.
ಆರ್‌ಬಿಐ ಪ್ರಕಾರ, ಸುಮಾರು 181 ಕೋಟಿ 2,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳು ಚಲಾವಣೆಯಲ್ಲಿವೆ.