ಕೊರೊನಾ ವಿರುದ್ಧ ಫೈಜರ್ ಲಸಿಕೆ ವಿಚಾರದಲ್ಲಿ ಭಾರತ ಸರ್ಕಾರದೊಂದಿಗಿನ ಒಪ್ಪಂದಕ್ಕೆ ನಾವು ಬದ್ಧವಾಗಿದ್ದೇವೆ ಅಂತಾ ಅಮೆರಿಕದ ಫಾರ್ಮಾ ಕಂಪನಿ ಹೇಳಿದೆ. ಬ್ರಿಟನ್ನಲ್ಲಿ ಫೈಜರ್ ಲಸಿಕೆಗೆ ಅನುಮೋದನೆ ದೊರಕಿದ್ದು ಮುಂದಿನ ವಾರದಿಂದ ಚಿಕಿತ್ಸೆಗೆ ಬಳಕೆಯಾಗಲಿದೆ.
ವಿಶ್ವದ ಅನೇಕ ರಾಷ್ಟ್ರಗಳ ಜೊತೆ ಲಸಿಕೆ ಹಂಚಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಆಯಾ ಸರ್ಕಾರಗಳ ಜೊತೆ ಮಾಡಿಕೊಂಡ ಒಪ್ಪಂದಗಳ ಆಧಾರದ ಮೇಲೆ ಲಸಿಕೆ ಹಂಚಿಕೆ ಮಾಡಲಾಗುತ್ತೆ ಅಂತಾ ಲಸಿಕೆ ತಯಾರಿಕಾ ಕಂಪನಿ ಹೇಳಿದೆ.
ಆದರೆ ಭಾರತದಲ್ಲಿ ಈವರೆಗೆ ಫೈಜರ್ಗೆ ಯಾವುದೇ ಅನುಮತಿ ಸಿಗದ ಕಾರಣ ಈ ಲಸಿಕೆ ಶೀಘ್ರದಲ್ಲೇ ಭಾರತಕ್ಕೆ ಬರೋದಿಲ್ಲ. ಭಾರತದಲ್ಲಿ ಫೈಜರ್ ಲಸಿಕೆಗೆ ಅನುಮತಿ ಸಿಗಬೇಕು ಅಂದರೆ ಮೊದಲು ಅದರ ಪ್ರಯೋಗಗಳು ದೇಶದಲ್ಲಿ ನಡೆಯಬೇಕು.
ಆದರೆ ಫೈಜರ್ ಆಗಲಿ ಅದರ ಸಹಭಾಗಿತ್ವ ಹೊಂದಿರುವ ಕಂಪನಿಗಳಾಗಲಿ ಭಾರತದಲ್ಲಿ ಯಾವುದೇ ಪ್ರಯೋಗಕ್ಕೆ ಅನುಮತಿ ಕೇಳಿಲ್ಲ. ಹೀಗಾಗಿ ಇನ್ಮೇಲೆ ಫೈಜರ್ ಈಗ ಭಾರತೀಯ ಕಂಪನಿಯೊಂದರ ಪಾಲುದಾರ ಆಗಿದ್ದರೂ ಸಹ ಭಾರತದಲ್ಲಿ ಅನುಮೋದನೆ ಪಡೆಯೋಕೆ ಬಹಳ ಸಮಯ ಹಿಡಿಯಲಿದೆ.