alex Certify ಮಾರ್ಚ್​ನಿಂದ 5, 10 ಹಾಗೂ 100 ರೂ. ನೋಟುಗಳು ಬ್ಯಾನ್​ ಆಗುತ್ತಾ…? ಈ ಬಗ್ಗೆ RBI ಹೇಳಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್​ನಿಂದ 5, 10 ಹಾಗೂ 100 ರೂ. ನೋಟುಗಳು ಬ್ಯಾನ್​ ಆಗುತ್ತಾ…? ಈ ಬಗ್ಗೆ RBI ಹೇಳಿದ್ದೇನು….?

ಈಗಿನ ಕಾಲದಲ್ಲಿ ಯಾವುದು ಕೂಡ ಶಾಶ್ವತವಾಗಿ ಬಾಳಿಕೆ ಬರುತ್ತೆ ಎಂದು ಗ್ಯಾರಂಟಿ ನೀಡೋಕೆ ಸಾಧ್ಯಾನೇ ಇಲ್ಲ. ಈ ಮಾತು ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳಿಗೂ ಅನ್ವಯಿಸುತ್ತೆ. ಮಾರ್ಚ್​ ಬಳಿಕ ಹಳೆಯ 100, 10 ಹಾಗೂ 5 ರೂಪಾಯಿ ನೋಟುಗಳು ಬ್ಯಾನ್​ ಆಗಲಿದೆ ಎಂಬ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡ್ತಿದೆ. ಮಾರ್ಚ್​ – ಏಪ್ರಿಲ್​ ಬಳಿಕ ಹಳೆಯ ಎಲ್ಲಾ ನೋಟುಗಳು ಚಲಾವಣೆಯಲ್ಲಿ ಇರೋದಿಲ್ಲ ಎಂದು ಹೇಳಲಾಗ್ತಿದೆ. ಈ ವದಂತಿಗೆ ಸ್ವತಃ ಆರ್​ಬಿಐ ಸ್ಪಷ್ಟನೆ ನೀಡಿದೆ.

ಆದರೆ ಆರ್​​ಬಿಐ ವೆಬ್​​ಸೈಟ್​ನಲ್ಲಿ ಈ ಬಗ್ಗೆ ಯಾವುದೇ ವಿಚಾರವನ್ನ ಹೇಳಲಾಗಿಲ್ಲ. ಇನ್ನು ಈ ಬಗ್ಗೆ ಸ್ವತಃ ಆರ್​ಬಿಐ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಈ ರೀತಿಯ ಯಾವುದೇ ನಿರ್ಧಾರವನ್ನ ಕೈಗೊಳ್ಳಲಾಗಿಲ್ಲ. ಸದ್ಯ ಚಲಾವಣೆಯಲ್ಲಿ ಇರುವ ಹಳೆಯ ನೋಟುಗಳು ಬ್ಯಾನ್​ ಆಗೋದಿಲ್ಲ.  ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿರುವ ಈ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.

ನಾವು ಬ್ಯಾಂಕ್​ಗಳಿಗೆ ಹಳೆಯ ಹಾಗೂ ಕೊಳೆಯಾದ ನೋಟುಗಳು ಬಂದರೆ ಮಾತ್ರ ನೀಡಬೇಡಿ ಎಂದು ಹೇಳಿದ್ದೆವು. ಎಲ್ಲಿಯೂ ಕೂಡ ಹಳೆಯ ನೋಟುಗಳು ಬ್ಯಾನ್​ ಆಗಲಿವೆ ಎಂದು ಹೇಳಿಯೇ ಇಲ್ಲ. ನೋಟುಗಳನ್ನ ಬ್ಯಾನ್​ ಮಾಡುವ ವಿಚಾರ ಸಧ್ಯಕ್ಕಂತೂ ಇಲ್ಲ. ನಾವು ನೀಡಿದ ಈ ಹೇಳಿಕೆಯನ್ನೇ ಯಾರೋ ತಿರುಚಿ ಇಂತಹ ವದಂತಿ ಹಬ್ಬಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...