ಕೊರೊನಾದ ಅವಧಿಯಲ್ಲೇ ಅನೇಕರ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದಿದೆ. ಕೊರೊನಾ ಭಯದಿಂದಾಗಿ ಅನೇಕರು ಆರ್ಟಿಒ ಕಚೇರಿಗೆ ಹೋಗೋಕೆ ಭಯ ಪಡ್ತಿದ್ದಾರೆ. ಈಗಾಗಲೇ ಸರ್ಕಾರ ಲೈಸೆನ್ಸ್ ನವೀಕರಣಕ್ಕೆ ಮಾರ್ಚ್ 31ರವರೆಗೆ ಅವಕಾಶ ನೀಡಿದೆ.
ಆದರೆ ಡಿಎಲ್ ನವೀಕರಣ ಮಾಡಬೇಕು ಅಂದರೆ ನೀವು ಆರ್ಟಿಒ ಕಚೇರಿಯಲ್ಲಿ ಸರದಿಯಲ್ಲಿ ನಿಲ್ಲಬೇಕು ಎಂದೇನಿಲ್ಲ. ನೀವು ಮನೆಯಲ್ಲೇ ಕೂತು ಡಿಎಲ್ ನವೀಕರಣ ಮಾಡಿದ್ರೆ ಒಂದು ತಿಂಗಳ ಅವಧಿಯಲ್ಲಿ ಹೊಸ ಡಿಎಲ್ ನಿಮ್ಮ ಕೈ ಸೇರಲಿದೆ.
ಲೈಸೆನ್ಸ್ ನವೀಕರಣ ಮಾಡಬೇಕು ಅಂದರೆ ಈ ಕೆಳಗಿನ ಹಂತಗಳನ್ನ ಅನುಸರಿಸಿ.
1. ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯದ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ.
2. ಇಲ್ಲಿ ಅಪ್ಲೈ ಆನ್ಲೈನ್ ಎಂಬ ಆಯ್ಕೆಯನ್ನ ಒತ್ತಿರಿ. ಇಲ್ಲಿ ನೀವು ಸರ್ವಿಸ್ ಆನ್ ಡ್ರೈವಿಂಗ್ ಲೈಸೆನ್ಸ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
3. ಈಗ ನಿಮಗೆ ಡಿಎಲ್ ನವೀಕರಣಕ್ಕೆ ಬೇಕಾದ ಕೆಲ ಮಾಹಿತಿಗಳನ್ನ ಕೇಳಲಾಗುತ್ತೆ.
4. ಎಲ್ಲಾ ಮಾಹಿತಿಗಳನ್ನ ತುಂಬಿದ ಬಳಿಕ ಸಬ್ಮಿಟ್ ಮಾಡಿ. ಈ ಕೆಲಸ ಮಾಡಿದ 30 ದಿನಗಳ ಒಳಗಾಗಿ ಹೊಸ ಡಿಎಲ್ ನಿಮ್ಮ ಮನೆಗೆ ಪೋಸ್ಟ್ ಮೂಲಕ ಬರಲಿದೆ.
5. ನೀವೇನಾದರೂ 40 ವರ್ಷ ಮೇಲಿನವರಾಗಿದ್ದು ನಿಮ್ಮ ಡಿಎಲ್ ಅವಧಿ ಮೀರಿದ್ದರೆ ನೀವು ವೈದ್ಯಕೀಯ ಪ್ರಮಾಣ ಪತ್ರ ಅಂದರೆ ಎ1 ಫಾರ್ಮ್ನ್ನ ಸಲ್ಲಿಸಬೇಕಾಗುತ್ತೆ. ಆನ್ಲೈನ್ನಲ್ಲೇ ನೀವು ಈ ಅರ್ಜಿಯನ್ನ ಲಗತ್ತಿಸಬಹುದಾಗಿದೆ.