ನಾಗಪುರ: ನೂರಕ್ಕೆ ನೂರು ಎಥನಾಲ್ ಇಂಧನದಿಂದ ಚಲಿಸುವ ವಾಹನಗಳನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನಾಗಪುರದಲ್ಲಿ ಮರ್ಸಿಡೆಸ್ ಬೆಂಜ್ ಕಂಪನಿಯ ಎಲೆಕ್ಟ್ರಿಕ್ ವಾಹನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ಲೀಟರ್ ಎಥನಾಲ್ ಗೆ 60 ರೂಪಾಯಿ ದರ ಇದ್ದು, ಪೆಟ್ರೋಲ್ ದರ 100 ರೂಪಾಯಿ ದಾಟಿದೆ. ಎಥನಾಲ್ ಶೇಕಡ 40ರಷ್ಟು ವಿದ್ಯುತ್ ಉತ್ಪಾದನೆ ಮಾಡುವುದರಿಂದ ಪ್ರತಿ ಲೀಟರ್ ಸರಾಸರಿ ದರ 15 ರೂಪಾಯಿ ಆಗಲಿದೆ ಎಂದು ತಿಳಿಸಿದ್ದಾರೆ.
ಸಂಪೂರ್ಣವಾಗಿ ಎಥನಾಲ್ ನಿಂದ ಚಾಲನೆಯಾಗುವ ವಾಹನಗಳನ್ನು ಟಿವಿಎಸ್, ಹೀರೋ ಸ್ಕೂಟರ್, ಬಜಾಜ್ ಕಂಪನಿಗಳು ತಯಾರಿಸಲಿದ್ದು, ಶೀಘ್ರವೇ ವಾಹನಗಳು ಮಾರುಕಟ್ಟೆಗೆ ಬರಲಿವೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.