ಕೆಲವೊಮ್ಮೆ ಸಂಸ್ಥೆಗಳು ತಗೆದುಕೊಳ್ಳುವ ಕೆಲ ನಿರ್ಧಾರಗಳು ಎಷ್ಟು ಸಮಸ್ಯೆ ಸೃಷ್ಟಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಮತ್ತೊಂದು ಸಿಗುವುದಿಲ್ಲ ಎನಿಸುತ್ತದೆ. 16 ವರ್ಷದ ಹಿಂದೆ ಸಂಸ್ಥೆ ಮಾಡಿದ ಒಂದು ಸರ್ವೇಯಿಂದ ಬರೋಬ್ಬರಿ 16 ವರ್ಷದ ಕಾಲದ ಗ್ರೀನ್ ಆನಿಯನ್ ಸೆರಲ್ ಮಾರುಕಟ್ಟೆಗೆ ಬರಲು ಸಾಧ್ಯವಾಗಿರಲಿಲ್ಲ.
ಹೌದು, ದಕ್ಷಿಣ ಕೊರಿಯಾದ ಕೆಲ್ಲಾಗ್ಸ್ ಎನ್ನುವ ಸಂಸ್ಥೆ 2004ರಲ್ಲಿ ಚಾಕೊಲೇಟ್ ಅಥವಾ ಗ್ರೀನ್ ಆನಿಯನ್ ಫ್ಲೇವರ್ ಸೆರಲ್ ಎರಡರಲ್ಲಿ ಯಾವುದನ್ನು ಪರಿಚಯಿಸಬೇಕು ಎಂದು ಸಮೀಕ್ಷೆಯೊಂದನ್ನು ನಡೆಸಿತ್ತು. ಇದರಲ್ಲಿ ಚಾಕೊಲೇಟ್ ಗೆಲುವು ಸಾಧಿಸಿದ್ದರಿಂದ ಬರೋಬ್ಬರಿ 16 ವರ್ಷ ಗ್ರೀನ್ ಆನಿಯನ್ ಫ್ಲೇವರ್ ಸೆರಲ್ ಅನ್ನು ಬಿಡುಗಡೆಗೊಳಿಸಿರಲಿಲ್ಲ. ಇದೀಗ ಕೊನೆಗೂ ಕಂಪನಿ ಜುಲೈ ಒಂದರಿಂದ ಈ ಫ್ಲೇವರ್ ಸೆರೆಲ್ ಅನ್ನು ಪರಿಚಯಿಸಿದೆ.
ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಯುವತಿಯೊಬ್ಬಳು ಮಾತನಾಡಿದ್ದು, ಅಂದು ನಾನು ಚಾಕೊಲೇಟ್‌ಗೆ ವೋಟ್ ಮಾಡಿದ್ದೆ. ಆ ಅವಧಿಯಲ್ಲಿ ನಾನು 13-14 ವರ್ಷದವಳಾಗಿದ್ದೆ. ಆದರೀಗ ಗ್ರೀನ್ ಆನಿಯನ್ ಫ್ಲೇವರ್ ಸೆರಲ್‌ನ್ನು ಕಾಯುತ್ತಿದ್ದೇನೆ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಸಂಸ್ಥೆಯೂ ಜಾಹೀರಾತನ್ನು ಪ್ರಕಟಸಿದ್ದು, ಇಷ್ಟು ದಿನ ನಿಮ್ಮನ್ನು ಕಾಯಿಸಿದ್ದಕ್ಕೆ ಕ್ಷಮೆ ಕೋರುವುದರೊಂದಿಗೆ, ನಿಮ್ಮ ಮುಂದೆ ನೂತನ ಫ್ಲೇವರ್ ಸೆರೆಲ್ ಎಂದು ಹೇಳಿದೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದ್ದು 9 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೊವನ್ನು ನೋಡಿದ್ದಾರೆ.