ಕೊರೊನಾ ಬಿಕ್ಕಟ್ಟಿನಿಂದಾಗಿ ಅನೇಕರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ಕೆಲಸ ಕಳೆದುಕೊಂಡಿದ್ದು, ಹಣ ಗಳಿಕೆ ಹೇಗೆ ಎಂಬ ಪ್ರಶ್ನೆ ಶುರುವಾಗಿದೆ. ಅಗತ್ಯತೆಗಳನ್ನು ಪೂರೈಸಲು ಜನರು ಸಾಲದ ಮೊರೆ ಹೋಗ್ತಿದ್ದಾರೆ. ಸಾಮಾನ್ಯವಾಗಿ ಜನರು ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲದ ಬಗ್ಗೆ ಆಲೋಚನೆ ಮಾಡ್ತಾರೆ.
ಕ್ರೆಡಿಟ್ ಕಾರ್ಡ್ ಸಾಲಕ್ಕೆ ಮೊದಲೇ ಒಪ್ಪಿಗೆ ಸಿಕ್ಕಿರುತ್ತದೆ. ಆದ ಕಾರಣ ಒಂದೇ ದಿನದಲ್ಲಿ ಸಾಲ ಸಿಗುತ್ತದೆ. ಇನ್ನು ವೈಯಕ್ತಿಕ ಸಾಲವನ್ನು 3-7 ದಿನಗಳಲ್ಲಿ ಪಡೆಯಬಹುದು. ಆರ್ಥಿಕ ಮುಗ್ಗಟ್ಟಿನಲ್ಲಿರುವ ವ್ಯಕ್ತಿಗಳು ಆದಷ್ಟು ವೈಯಕ್ತಿಕ ಸಾಲ ಪಡೆಯುವುದನ್ನು ತಪ್ಪಿಸುವುದು ಒಳ್ಳೆಯದು.
ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಶೇಕಡಾ 10ರಿಂದ 24ರಷ್ಟಿರುತ್ತದೆ. ಬಡ್ಡಿ ಸಾಲ ನೀಡುವ ಸಂಸ್ಥೆ ಹಾಗೂ ನಿಯಮಗಳ ಮೇಲೆ ಬದಲಾಗುತ್ತದೆ. ಕ್ರೆಡಿಟ್ ಸ್ಕೋರ್, ಮಾಸಿಕ ಆದಾಯ, ಉದ್ಯೋಗದ ವಿವರ ಮತ್ತು ಕಂಪನಿಯ ಪ್ರೊಫೈಲ್ ಎಲ್ಲವನ್ನೂ ನೋಡಿ ಸಾಲ ನೀಡಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಸಾಲಗಳು ತುಂಬಾ ದುಬಾರಿಯಾಗಿದೆ. ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳು ವಾರ್ಷಿಕವಾಗಿ ಶೇಕಡಾ 35 ರಿಂದ 40ರಷ್ಟಿರುತ್ತದೆ. ವೈಯಕ್ತಿಕ ಸಾಲದ ಮೇಲೆ ವರ್ಷಕ್ಕೆ ಶೇಕಡಾ 15ರಷ್ಟು ಶುಲ್ಕ ವಿಧಿಸುತ್ತದೆ. ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇಕಡಾ 40ರಷ್ಟು ಶುಲ್ಕ ವಿಧಿಸುತ್ತದೆ. ಕ್ರೆಡಿಟ್ ಕಾರ್ಡ್‌ನಲ್ಲಿ ಮೊದಲೇ ಅನುಮೋದಿತ ಸಾಲಗಳಿವೆ. ಅವರ ಪ್ರಮಾಣ ಕಡಿಮೆ. ವೈಯಕ್ತಿಕ ಸಾಲದಲ್ಲಿ 50 ಸಾವಿರದಿಂದ 25 ಲಕ್ಷ ರೂಪಾಯಿಗಳವರೆಗೆ ನೀಡಲಾಗುತ್ತದೆ. ವೈಯಕ್ತಿಕ ಸಾಲವು ದೊಡ್ಡ ಖರ್ಚುಗಳಿಗೆ ಸಹಾಯಕಾರಿ.
ಜೀವ ವಿಮೆ ಸಾಲದ ಮತ್ತೊಂದು ಉತ್ತಮ ಆಯ್ಕೆ. ಎಲ್ಐಸಿ ತನ್ನ ಪಾಲಿಸಿದಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಸಾಲದ ಮೊತ್ತವನ್ನು ಎಲ್‌ಐಸಿ ನೀತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.