ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಹೆಚ್ಚು ಮಾಡಲಾಗಿದ್ದರೂ ಸಹ ’ಕಳೆದ ಹತ್ತು ವರ್ಷಗಳಲ್ಲೇ ಮಕ್ಕಳ ಪಾಲಿಗೆ ಈ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ’ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ನರೇಂದ್ರ ಮೋದಿ ಸರ್ಕಾರದ ಒಂಬತ್ತನೇ ಬಜೆಟ್ ಸಂದರ್ಭದಲ್ಲಿ ಮುಂದಿನ ವಿತ್ತೀಯ ವರ್ಷದ ಬಂಡವಾಳ ವೆಚ್ಚವನ್ನು 4.39 ಲಕ್ಷ ಕೋಟಿ ರೂ.ಗಳಿಂದ 5.54 ಲಕ್ಷ ಕೋಟಿ ರೂ.ಗಳಿಗೆ ಏರಿಸಲಾಗಿದೆ. ಇದೇ ವೇಳೆ ಅನೇಕ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ. ಅವುಗಳಲ್ಲಿ ಒಂದು — ಮಕ್ಕಳ ಕಲ್ಯಾಣಕ್ಕೆ ಕೊಡಮಾಡುವ ಬಜೆಟ್.
‘ಬಜೆಟ್’ ಮರು ದಿನವೇ ಗ್ರಾಹಕರಿಗೆ ಬಿಗ್ ಶಾಕ್: ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ
2021-22ರ ಕೇಂದ್ರ ಬಜೆಟ್ ಗ್ರಾತ್ರದ 2.45%ನಷ್ಟು ನಿಧಿಯನ್ನು ಮಕ್ಕಳಿಗೆಂದು ವಿನಿಯೋಗಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷದ ಬಜೆಟ್ ವೇಳೆ ಇದೇ ಉದ್ದೇಶಕ್ಕೆಂದು 3.16% ಮೊತ್ತವನ್ನು ವಿನಿಯೋಗಿಸಲಾಗಿತ್ತು.
ಮಕ್ಕಳ ಆರೋಗ್ಯಕ್ಕೆ ಕೊಡಮಾಡಿರುವ ಅನುದಾನಗಳು ಹೆಚ್ಚಿದರೂ ಸಹ ಮಕ್ಕಳ ಶಿಕ್ಷಣ ಹಾಗೂ ರಕ್ಷಣೆಗೆ ಕೊಡುವ ಅನುದಾನದಲ್ಲಿ ಭಾರೀ ಇಳಿಕೆಯಾಗಿದೆ.