ಬೆಳಗಾವಿ: ಮಳೆ ಇಲ್ಲದ ಕಾರಣ ಬಿಳಿ ಜೋಳ ಬಿತ್ತನೆ ಕಡಿಮೆಯಾಗಿದೆ. ಇದರ ಪರಿಣಾಮ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಬಿಳಿ ಜೋಳದ ಬೆಲೆ ಗಗನಕ್ಕೇರಿದೆ.
ಬಿತ್ತನೆ ಬೀಜ ಕೆಜಿಗೆ 78 ರಿಂದ 90 ರೂ.ಗೆ ಮಾರಾಟವಾಗುತ್ತಿದ್ದು, ಹಿಂಗಾರು ಬಿತ್ತನೆಗೆ ಮುಂದಾದ ರೈತರಿಗೆ ಸಂಕಷ್ಟ ಎದುರಾಗಿದೆ. ಕ್ವಿಂಟಾಲ್ ಗೆ 6 ಸಾವಿರದಿಂದ 6800 ರೂ., ಚಿಲ್ಲರೆ ದರ 6500 -7400 ರೂ.ವರೆಗೆ ಇದೆ.
ವಿವಿಧ ಎಪಿಎಂಸಿ, ಖಾಸಗಿ ಸಗಟು ಮಾರುಕಟ್ಟೆಗಳಲ್ಲಿ ಬಿಳಿ ಜೋಳ ಪೂರೈಕೆ ಭಾರಿ ಕಡಿಮೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಜೋಳದ ದರ ಕ್ವಿಂಟಾಲ್ ಗೆ 4200 -4800 ರೂ. ನಿಂದ 6,000-.6,800 ರೂ.ವರೆಗೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 65 ರಿಂದ 75 ರೂ.ರವರೆಗೆ ಮಾರಾಟವಾಗುತ್ತಿದೆ.
ಮಳೆ ಕೊರತೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಮೊದಲಾದ ಕಾರಣಗಳಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಬಿಳಿ ಜೋಳ ಬಿತ್ತನೆ ಪ್ರದೇಶ ಶೇಕಡ 25ರಷ್ಟು ಕಡಿಮೆಯಾಗಿದೆ. ಬಿಳಿ ಜೋಳದ ಬೆಲೆ ಗಗನಕ್ಕೇರಿದ್ದು, ರೊಟ್ಟಿ ಪ್ರಿಯರಿಗೆ ಹಾಗೂ ಬಿತ್ತನೆಗೆ ರೆಡಿಯಾಗಿದ್ದ ರೈತರಿಗೆ ಬಿಸಿ ತಟ್ಟಿದೆ.