ಕೋವಿಡ್ ಸೋಂಕು ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸಂದರ್ಭದಲ್ಲಿ, ಇಲ್ಲಿನ ಶ್ರೀಮಂತರು ಇದರಿಂದ ತಪ್ಪಿಸಿಕೊಳ್ಳಲು ದುಬಾರಿ ವೆಚ್ಚಮಾಡಿ ವಿದೇಶಕ್ಕೆ ಹಾರಿದ್ದಾರೆ.
ಹೇಗೆನ್ನುತ್ತೀರಾ? ಇಲ್ಲಿದೆ ನೋಡಿ ನೈಜ ಚಿತ್ರಣ. ಭಾರತೀಯ ಶ್ರೀಮಂತರು ಖಾಸಗಿ ಜೆಟ್ ಗಳಿಗೆ ದುಬಾರಿ ದರ ನೀಡಿ ದುಬೈ ಕಡೆ ಪ್ರಯಾಣ ಬೆಳೆಸುತ್ತಿದ್ದಾರೆ.
ವಿಮಾನಯಾನ ಬಂದ್ ಹಿನ್ನೆಲೆಯಲ್ಲಿ ಖಾಸಗಿ ಜೆಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಿದಂತೆ ಖಾಸಗಿ ಪ್ರಯಾಣ ದರ ಕೂಡ ವಿಪರೀತವಾಗಿದೆ. ಆ ದರವನ್ನು ಪಾವತಿ ಮಾಡಿ ದುಬೈ, ಲಂಡನ್ ಸೇರಿ ಬೇರೆ ನಗರಗಳತ್ತ ಹಾರುತ್ತಿದ್ದಾರೆ.
ಶುಕ್ರವಾರ ಮತ್ತು ಶನಿವಾರ ಮುಂಬೈಯಿಂದ ದುಬೈಗೆ ಕಮರ್ಷಿಯಲ್ ಫ್ಲೈಟ್‌ಗಳಲ್ಲಿ ಟಿಕೆಟ್ ದರ 80,000 ರೂಪಾಯಿಗಳಷ್ಟು ($ 1,000) ಇತ್ತು. ಇದು ಸಾಮಾನ್ಯ ದರಕ್ಕಿಂತ 10 ಪಟ್ಟು ಹೆಚ್ಚು.
ಶನಿವಾರ ಬೆಳಗ್ಗೆ 4 ಗಂಟೆಗೆ ಕನಿಷ್ಠ ಆರು ಖಾಸಗಿ ಜೆಟ್‌ಗಳು ಭಾರತದಿಂದ ಲಂಡನ್‌ಗೆ ಹಾರಿದವು. ದೇಶದ ಶ್ರೀಮಂತ ಕುಟುಂಬಗಳು ಒಟ್ಟಾರೆ 1.04 ಕೋಟಿ ರೂ. ಪ್ರಯಾಣ ವೆಚ್ಚ ಪಾವತಿಸಿದ್ದಾರೆ.
ಬೆಡ್, ಐಸಿಯು, ಆಕ್ಸಿಜನ್ ಕೊರತೆ –ಇನ್ನೊಂದು ವಾರ ಲಾಕ್ಡೌನ್ ವಿಸ್ತರಣೆ ಬಗ್ಗೆ ನಾಳೆ ನಿರ್ಧಾರ
ಬೇಡಿಕೆ ಹೆಚ್ಚಾಗುತ್ತಿದ್ದಂತೆ ವಿದೇಶದಿಂದ ಹೆಚ್ಚಿನ ವಿಮಾನಗಳನ್ನು ಕೋರಿದ್ದೇವೆ, ಮುಂಬೈನಿಂದ ದುಬೈಗೆ 13 ಆಸನಗಳ ಜೆಟ್ ಬಾಡಿಗೆಗೆ 38,000 ಡಾಲರ್ ಮತ್ತು ಆರು ಆಸನಗಳ ವಿಮಾನವನ್ನು ಬಾಡಿಗೆಗೆ ಪಡೆಯಲು 31,000 ಡಾಲರ್ ಖರ್ಚಾಗುತ್ತದೆ ಎಂದು ಎಂಥ್ರಾಲ್ ಏವಿಯೇಷನ್ ವಕ್ತಾರರು ಹೇಳಿಕೊಂಡಿದ್ದರೆ.
ಯುಕೆ ಮತ್ತು ಯುಎಇಗೆ ಸಾಮಾನ್ಯ ವಿಮಾನ ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಟ ನಡೆಸುತ್ತಿರುವಾಗಲೇ ಖಾಸಗಿ ಜೆಟ್‌ಗಳ ಬೇಡಿಕೆ ಗಗನಕ್ಕೇರಿತು.
ಭಾನುವಾರ ನಮ್ಮ 12 ವಿಮಾನಗಳು ದುಬೈಗೆ ಹೋಗುತ್ತಿವೆ ಮತ್ತು ಪ್ರತಿ ವಿಮಾನವು ಸಂಪೂರ್ಣವಾಗಿ ತುಂಬಿದೆ ಎಂದು ಖಾಸಗಿ ಸಂಸ್ಥೆಯೊಂದರ ವಕ್ತಾರರು ತಿಳಿಸಿದ್ದಾರೆ.