ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವ ನಂಬರ್ ನಮೂದಿಸಲಾಗಿದೆ ಎಂಬುದು ಮರೆತು ಹೋಗಿದ್ಯಾ? ಇದನ್ನು ಸುಲಭವಾಗಿ ಪತ್ತೆ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಸರ್ಕಾರಿ ಕೆಲಸ, ಬ್ಯಾಂಕ್ ಸೇರಿದಂತೆ ಎಲ್ಲ ಕೆಲಸಕ್ಕೆ ಆಧಾರ್ ಅನಿವಾರ್ಯ. ಹಾಗೆ ಆಧಾರ್ ಗೆ ಫೋನ್ ನಂಬರ್ ನೀಡುವುದು ಕಡ್ಡಾಯ. ಈ ನಂಬರ್ ಮರೆತು ಹೋಗಿದ್ರೆ ಎರಡು ನಿಮಿಷದಲ್ಲಿ ಪತ್ತೆ ಮಾಡಬಹುದು.
ಮೊದಲು ಯುಐಡಿಎಐನ ಅಧಿಕೃತ ವೆಬ್‌ಸೈಟ್ https://uidai.gov.in/ ಗೆ ಹೋಗಬೇಕು. ಅಲ್ಲಿ ಮೈ ಆಧಾರ್ ಆಯ್ಕೆಗೆ ಹೋಗಬೇಕು. ಅಲ್ಲಿ ಆಧಾರ್ ಸರ್ವೀಸ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಇಮೇಲ್/ಮೊಬೈಲ್ ಸಂಖ್ಯೆಯ ವಿಡಿಯೋ ತೆರೆದುಕೊಳ್ಳುತ್ತದೆ.
ಅಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಅದ್ರ ಕೆಳಗೆ ಮೊಬೈಲ್ ನಂಬರ್ ಹಾಕಬೇಕು. ಕ್ಯಾಪ್ಚಾ ಹಾಕಿದ ನಂತ್ರ ಒಟಿಪಿ ಬರುತ್ತದೆ. ನೀವು ಮೊದಲೇ ಮೊಬೈಲ್ ನಂಬರ್ ನಮೂದಿಸಿದ್ದರೆ ಈಗಾಗಲೇ ಈ ನಂಬರ್ ಆಧಾರ್ ಜೊತೆ ಲಿಂಕ್ ಆಗಿದೆ ಎಂಬ ಸಂದೇಶ ಬರುತ್ತದೆ. ಮೊಬೈಲ್ ನಂಬರ್ ನೋಂದಾಯಿಸಲಾಗಿಲ್ಲವೆಂದ್ರೆ ಈ ನಂಬರ್ ಆಧಾರ್ ಜೊತೆ ಲಿಂಕ್ ಆಗಿಲ್ಲ ಎನ್ನುವ ಸಂದೇಶ ಬರುತ್ತದೆ. ಇದೇ ರೀತಿ ಇಮೇಲ್ ಐಡಿಯನ್ನು ಕೂಡ ಚೆಕ್ ಮಾಡಬಹುದು.