alex Certify ಪಡಿತರ ಚೀಟಿದಾರರು, ರೈತರಿಗೆ ಗುಡ್ ನ್ಯೂಸ್: ವರ್ಷಕ್ಕಾಗುವಷ್ಟು ಗೋಧಿ ದಾಸ್ತಾನು, ರೈತರಿಗೆ ಉತ್ತಮ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರು, ರೈತರಿಗೆ ಗುಡ್ ನ್ಯೂಸ್: ವರ್ಷಕ್ಕಾಗುವಷ್ಟು ಗೋಧಿ ದಾಸ್ತಾನು, ರೈತರಿಗೆ ಉತ್ತಮ ಬೆಲೆ

ನವದೆಹಲಿ: ಒಂದು ವರ್ಷದವರೆಗೆ ಕಾಯ್ದುಕೊಳ್ಳಲು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಗೋಧಿಯನ್ನು ದಾಸ್ತಾನು ಮಾಡಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ(DFPD) ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದಾರೆ.

ಮುಂದಿನ ವರ್ಷದಲ್ಲಿ ಕಲ್ಯಾಣ ಯೋಜನೆಗಳ ಅಗತ್ಯವನ್ನು ಪೂರೈಸಿದ ನಂತರ, ಏಪ್ರಿಲ್ 1, 2023 ರಂದು, ಭಾರತವು 80 LMT ಗೋಧಿಯ ದಾಸ್ತಾನುಗಳನ್ನು ಹೊಂದಿರುತ್ತದೆ, ಇದು ಕನಿಷ್ಟ ಅವಶ್ಯಕತೆಯಾದ 75 LMT ಗಿಂತ ಹೆಚ್ಚಾಗಿರುತ್ತದೆ. 1050 LMT ಉತ್ಪಾದನೆಯನ್ನು ನಿರೀಕ್ಷಿಸಲಾಗಿದ್ದರೂ ಸಹ ಭಾರತವು ಹೆಚ್ಚುವರಿ ಗೋಧಿಯನ್ನು ಹೊಂದಿರುತ್ತದೆ, 2023 ರ ಆರ್ಥಿಕ ವರ್ಷದಲ್ಲಿ 1110 LMT ನ ಆರಂಭಿಕ ಅಂದಾಜಿಗಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿ.ಎಫ್‌.ಪಿ.ಡಿ. ಕಾರ್ಯದರ್ಶಿ, ಗೋಧಿ ರಫ್ತು ತಡೆಯಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ದೇಶದಲ್ಲಿ ಖಾದ್ಯ ತೈಲ ದಾಸ್ತಾನು ಕೂಡ ಸಾಕಷ್ಟಿದೆ. ಇಂಡೋನೇಷ್ಯಾದ ತಾತ್ಕಾಲಿಕ ನಿಷೇಧದ ನಂತರ, ತಾಳೆ ಎಣ್ಣೆ ಆಮದು ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ದೇಶದಲ್ಲಿ ಖಾದ್ಯ ತೈಲ ಬೆಲೆಗಳನ್ನು ಕಡಿಮೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಗೋಧಿ ಸಂಗ್ರಹಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿಂದಾಗಿ ಹೆಚ್ಚಿನ ಪ್ರಮಾಣದ ಗೋಧಿಯನ್ನು ಎಂ.ಎಸ್‌.ಪಿ.(ಕನಿಷ್ಠ ಬೆಂಬಲ ಬೆಲೆ) ಗಿಂತ ಹೆಚ್ಚಿನ ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ, ಇದರಿಂದ ರೈತರಿಗೆ ಉತ್ತಮ ದರ ಸಿಗುತ್ತಿದೆ ಎಂದಿದ್ದಾರೆ.

ಈ ವರ್ಷ ಮಾರುಕಟ್ಟೆ ಬೆಲೆಗಳ ಹೆಚ್ಚಳ ಮತ್ತು ಖಾಸಗಿ ಕಂಪನಿಗಳು ದೇಶೀಯ ಮತ್ತು ರಫ್ತು ಉದ್ದೇಶಗಳಿಗಾಗಿ ಹೆಚ್ಚಿನ ಬೇಡಿಕೆಯಿಂದಾಗಿ, ಸರ್ಕಾರಿ ಸಂಸ್ಥೆಯಿಂದ ಖರೀದಿ ಕಡಿಮೆಯಾಗಿದೆ. ಆದರೆ ಅದು ರೈತರ ಪರವಾಗಿದೆ. ರೈತರು ಗೋಧಿಗೆ ಉತ್ತಮ ಬೆಲೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮೊದಲು ರೈತರಿಗೆ ಸರ್ಕಾರಕ್ಕೆ ಮಾರಾಟ ಮಾಡದೆ ಬೇರೆ ದಾರಿ ಇರಲಿಲ್ಲ. ಆದರೆ, ಈಗ ಅವರು ಖಾಸಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗದ ಪ್ರಮಾಣವನ್ನು ಮಾತ್ರ ಸರ್ಕಾರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...