ಭಾರತೀಯ ವಾಟ್ಸಾಪ್ ಬಳಕೆದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ವಾಟ್ಸಾಪ್ ಬಳಕೆದಾರರು ಆಪ್ ಮೂಲಕ ಹಣ ವರ್ಗಾಯಿಸಬಹುದಾಗಿದೆ. ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ವಾಟ್ಸಾಪ್‌ಗೆ ಅನುಮೋದನೆ ನೀಡಿದೆ.
ಸುಮಾರು 3 ವರ್ಷಗಳಿಂದ ವಾಟ್ಸಾಪ್ ಎನ್ ಪಿ ಸಿ ಐ ಒಪ್ಪಿಗೆಗೆ ಕಾದಿತ್ತು. ಕೊನೆಗೂ ಎನ್ ಪಿ ಸಿ ಐ ಒಪ್ಪಿಗೆ ಸಿಕ್ಕಿತ್ತು ಈಗ ಕಂಪನಿ ಭಾರತದಲ್ಲಿ ಲೈವ್ ಮಾಡಿದೆ. ವಾಟ್ಸಾಪ್ ಯುಪಿಐ ಆಧಾರಿತ ಪಾವತಿ ಪರೀಕ್ಷೆಯನ್ನು ಈಗಾಗಲೇ ಮಾಡಿದೆ.
ಭಾರತದಲ್ಲಿ ವಾಟ್ಸಾಪ್ ಪೇಮೆಂಟ್ ಹತ್ತು ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಿದೆ. ಮೊದಲೇ ನಿಮ್ಮ ವಾಟ್ಸಾಪ್ ನಲ್ಲಿ ಪೇಮೆಂಟ್ ಆಯ್ಕೆಯಿದ್ದರೆ ನೀವು ಅದನ್ನು ಬಳಸಬಹುದು. ಒಂದು ವೇಳೆ ಆಯ್ಕೆ ಇಲ್ಲದೆ ಹೋದಲ್ಲಿ ನೀವು ವಾಟ್ಸಾಪ್ ಅಪ್ಡೇಟ್ ಮಾಡಿ ವಾಟ್ಸಾಪ್ ಪೇಮೆಂಟ್ ಆಯ್ಕೆಯನ್ನು ಪಡೆಯಬಹುದು. ವಾಟ್ಸಾಪ್ ಪೇಮೆಂಟ್ ಬಳಸಲು ಗ್ರಾಹಕರ ಬಳಿ ಡೆಬಿಟ್ ಕಾರ್ಡ್ ಇರಬೇಕು. ವಾಟ್ಸಾಪ್ ಪೇಮೆಂಟ್ ಗೆ ಹೋಗಿ ಬ್ಯಾಂಕ್ ವಿವರಗಳನ್ನು ನಮೂದಿಸಿದ ನಂತ್ರ ಇದನ್ನು ಸಕ್ರಿಯಗೊಳಿಸಬಹುದು. ಇದಕ್ಕಾಗಿ ವಾಟ್ಸಾಪ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಜಿಯೋ ಪೇಮೆಂಟ್ಸ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ.