ಮೊಬೈಲ್ ಫೋನ್ ಮೂಲಕ ಬಳಕೆಗೆ ಬಂದ ವಾಟ್ಸಾಪ್ ಈಗೀಗ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಅಲ್ಲೂ ವೆಬ್ ಮೂಲಕ ಬಳಕೆಯಾಗುತ್ತಿದೆ.
ವಾಟ್ಸಾಪ್ ನ ಒಂದೇ ಖಾತೆ ಏಕಕಾಲದಲ್ಲಿ ಎರಡು-ಮೂರು ಉಪಕರಣಗಳಲ್ಲಿ ಬಳಸಲ್ಪಡುತ್ತಿವೆ. ಆದರೆ, ಮೊಬೈಲ್ ನಲ್ಲಿ ಮಾತ್ರ ಚಾಟ್ ಹಿಸ್ಟರಿ (ಚರಿತ್ರೆ) ಸೇವ್ ಮಾಡಬಹುದಿತ್ತು.
ಇದೀಗ ಕಂಪ್ಯುಟರ್, ಲ್ಯಾಪ್‌ಟಾಪ್ ನಂತಹ ಬಹು ಮಾದರಿಯ ಉಪಕರಣಗಳಿಗೂ ಚಾಟ್ ಹಿಸ್ಟರಿ ವಿಲೀನ (ಸಿಂಕ್) ಮಾಡಲು ಅವಕಾಶ ಕಲ್ಪಿಸಿದೆ. ಇದರಿಂದ ಅಲ್ಲಿಯೂ ಚಾಟ್ ಹಿಸ್ಟರಿ ಸೇವ್ ಆಗಿರಲಿದ್ದು, ಬ್ಯಾಕ್ ಅಪ್ ಪಡೆಯಬಹುದಾಗಿರುತ್ತದೆ.