ಪ್ರತಿಯೊಬ್ಬರು ಅತಿ ಹೆಚ್ಚು ಬಳಸುವ ಅಪ್ಲಿಕೇಷನ್ ನಲ್ಲಿ ವಾಟ್ಸಾಪ್ ಮುಂದಿದೆ. ಜನರ ಗೌಪ್ಯತೆಯನ್ನು ಕಾಪಾಡಿಕೊಳ್ತಿರುವುದಾಗಿ ವಾಟ್ಸಾಪ್ ಅನೇಕ ಬಾರಿ ಹೇಳಿದೆ. ಆದ್ರೆ ಇತ್ತೀಚಿಗೆ ವಾಟ್ಸಾಪ್ ದೌರ್ಬಲ್ಯವೊಂದನ್ನು ಪತ್ತೆ ಹಚ್ಚಲಾಗಿದೆ. ನಿಮ್ಮ ವಾಟ್ಸಾಪ್ ಖಾತೆಯನ್ನು ಅನೇಕ ಸಮಯದವರೆಗೆ ಅಪರಿಚಿತ ವ್ಯಕ್ತಿ ನಿರ್ಬಂಧಿಸಬಹುದು. ಇದಕ್ಕೆ ಆತ ಹ್ಯಾಕರ್ಸ್ ಆಗಿರಬೇಕೆಂದೇನಿಲ್ಲ. ಹ್ಯಾಕಿಂಗ್ ನಲ್ಲಿ ಅನುಭವ ಬೇಕಿಲ್ಲ.
ಫೋರ್ಬ್ಸ್ ವರದಿಯ ಪ್ರಕಾರ, ಈ ಹೊಸ ದೋಷವನ್ನು ಭದ್ರತಾ ಸಂಶೋಧಕರಾದ ಲೂಯಿಸ್ ಮೆರ್ಕ್ವೆಜ್ ಕಾರ್ಪೆಂಥೋ ಮತ್ತು ಅರ್ನೆಸ್ಟೊ ಕೆನೆಲ್ಸ್ ಪರೇನಾ ಕಂಡುಹಿಡಿದಿದ್ದಾರೆ. ನಿಮ್ಮ ವಾಟ್ಸಾಪ್ ನಂಬರ್ ಹೊಂದಿರುವ ಯಾವುದೇ ವ್ಯಕ್ತಿ ಇದರ ಲಾಭ ಪಡೆಯಬಹುದು. ದೀರ್ಘಕಾಲದವರೆಗೆ ನಿಮ್ಮ ಖಾತೆಯಿಂದಲೇ ನಿಮ್ಮನ್ನು ಲಾಕ್ ಮಾಡಬಹುದು. ನಿರ್ಬಂಧದಿಂದ ಹೊರ ಬರುವುದು ಎಲ್ಲರಿಗೂ ಸುಲಭವಲ್ಲವೆಂದು ಸಂಶೋಧಕರು ಹೇಳಿದ್ದಾರೆ.
ನಿಮ್ಮ ನಂಬರ್ ದುರುಪಯೋಗಪಡಿಸಿಕೊಳ್ಳಲು ಬಯಸುವವರಿಗೆ ನಿಮ್ಮ ನಂಬರ್ ಹಾಗೂ ಒಂದು ಸ್ಮಾರ್ಟ್ಫೋನ್ ಇದ್ರೆ ಸಾಕಾಗುತ್ತದೆ. ವಾಟ್ಸಾಪ್ ಡೌನ್ಲೋಡ್ ಮಾಡ್ತಿದ್ದಂತೆ ಅವರು ನಿಮ್ಮ ನಂಬರ್ ಹಾಕುತ್ತಾರೆ. ಮೂರು ನಾಲ್ಕು ಬಾರಿ ಒಟಿಪಿ ಟ್ರೈ ಮಾಡಿದ ನಂತ್ರ ಬೇರೆ ಆಯ್ಕೆಗೆ ಹೋಗುತ್ತಾರೆ. ಆದ್ರೆ ಒಟಿಪಿ ಮೂಲಕ ನಿಮ್ಮ ಖಾತೆ ಪ್ರವೇಶಕ್ಕೆ ಅಪರಿಚಿತ ಪ್ರಯತ್ನ ನಡೆಸುತ್ತಿದ್ದಾನೆಂಬುದನ್ನು ನೀವು ಪತ್ತೆ ಮಾಡಬಹುದು.
ಪ್ರಾಥಮಿಕ ಬಳಕೆದಾರ ಖಾತೆ ಪ್ರವೇಶಿಸುವುದನ್ನು ತಪ್ಪಿಸಲು ಹ್ಯಾಕರ್, ವಾಟ್ಸಾಪ್ ಗೆ ಒಂದು ಇ-ಮೇಲ್ ಮಾಡುತ್ತಾನೆ. ವಾಟ್ಸಾಪ್ ಖಾತೆ ನಿಷ್ಕ್ರಿಯಗೊಳಿಸುವಂತೆ ಕೇಳುತ್ತಾನೆ. ಆ ನಂತ್ರ ಪ್ರಾಥಮಿಕ ಬಳಕೆದಾರ ವಾಟ್ಸಾಪ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.