ನವದೆಹಲಿ: ದೇಶಾದ್ಯಂತ ವಾಟ್ಸಾಪ್ ಸರ್ವರ್ ಡೌನ್ ಆಗಿದ್ದು, ಮೆಸೇಜ್ ಫೋಟೋ, ವಿಡಿಯೋ ಕಳಿಸಲಾಗದೇ ಬಳಕೆದಾರರು ಪರದಾಟ ನಡೆಸಿದ್ದಾರೆ.
ಮಧ್ಯಾಹ್ನ 12.40 ರ ನಂತರ ದೇಶಾದ್ಯಂತ ಬಳಕೆದಾರರ ವಾಟ್ಸಾಪ್ ಸರ್ವರ್ ಡೌನ್ ಆಗಿದ್ದು, ಅನೇಕರು ದೂರಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್ ಡೌನ್ ಆಗಿ ಮೆಸೇಜ್ ಕಳಿಸಲು ಸಾಧ್ಯವಾಗದೇ ಬಳಕೆದಾರರು ಪರದಾಡಿದ್ದಾರೆ.
ಜನಪ್ರಿಯ ಸಾಮಾಜಿಕ ಜಾಲತಾಣ ಆನ್ ಲೈನ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಸ್ಥಗಿತಗೊಂಡಿದೆ. ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ. ಈ ಸಮಸ್ಯೆಯು ವಿಶ್ವಾದ್ಯಂತ ವರದಿಯಾಗಿದೆ ಎಂದು Twitter ನಲ್ಲಿ ಬಳಕೆದಾರರು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ಬಗ್ಗೆ ವಾಟ್ಸಾಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
200 ಮಿಲಿಯನ್ ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರೊಂದಿಗೆ WhatsApp ವಿಶ್ವದ ಅತಿದೊಡ್ಡ ಚಾಟ್ ವೇದಿಕೆಯಾಗಿದೆ. ಸರ್ವರ್ ಡೌನ್ ಆಗಿ ಬಳಕೆದಾರರು ಪರದಾಡಿದ್ದಾರೆ.
ತಾಂತ್ರಿಕ ತೊಂದರೆಯಿಂದ ಸರ್ವರ್ ಡೌನ್ ಆಗಿ ಸಮಸ್ಯೆಯಾಗಿದ್ದು, ಸರಿಪಡಿಸುವುದಾಗಿ ಮೆಟಾ ತಿಳಿಸಿದೆ.