ವಾಟ್ಸಾಪ್ ಯಾವುದೇ ಡೇಟಾ ಸಂಗ್ರಹಿಸುತ್ತಿಲ್ಲ ಎಂದು ಕಂಪನಿಯ ಮುಖ್ಯಸ್ಥ ವಿಲ್ ಕ್ಯಾತ್ ಕಾರ್ಟ್ ಸ್ಪಷ್ಟನೆ ನೀಡಿದ್ದಾರೆ.
ವಾಟ್ಸಾಪ್ ಡೇಟಾ ಸಂಗ್ರಹಿಸುತ್ತಿದೆ. ಅದರ ಆಧಾರದ ಮೇಲೆಯೇ ಫೇಸ್ ಬುಕ್ ನಲ್ಲಿ ಜಾಹೀರಾತು ಬರುತ್ತಿದೆ. ಇದರಿಂದ ಇನ್ಸ್ ಟಾಗ್ರಾಂ ಅಥವಾ ಬೇರೆ ಆ್ಯಪ್ ಬಳಸಿ ಎಂದು ಟೆಸ್ಲಾ ಕಂಪನಿ ಹೇಳಿದೆ. ಇನ್ನೂ ಕೆಲ ಕಂಪನಿಗಳು ಈ ಬಗ್ಗೆ ಮಾತನಾಡಿವೆ ಇದರಿಂದ ವಾಟ್ಸಾಪ್ ಸ್ಪಷ್ಟನೆ ನೀಡಿದೆ.
ಆ ರೀತಿ ವಾಟ್ಸಾಪ್ ಯಾವುದೇ ಡೇಟಾ ಸಂಗ್ರಹಿಸುತ್ತಿಲ್ಲ. ಹಲವರು ಇದನ್ನು ತಮ್ಮ ಉದ್ಯಮ ವೃದ್ಧಿಗಾಗಿ, ಆಫೀಶಿಯಲ್ ಕಾರ್ಯಗಳಿಗಾಗಿ ನಮ್ಮ ಆ್ಯಪ್ ಬಳಸುತ್ತಾರೆ. ಕೋಟಿ, ಕೋಟಿ ಬಳಕೆದಾರರಿದ್ದಾರೆ. ಹಾಗೆ ಒಬ್ಬೊಬ್ಬರ ಡೇಟಾ ಸಂಗ್ರಹ ಅಸಾಧ್ಯದ ಮಾತು. ಆರೋಪ ನಿರಾಧಾರವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಬರುವ ಅಪ್ ಡೇಟ್ ನಲ್ಲೂ ಅಂಥ ಯಾವುದೇ ಅಂಶಗಳಿಲ್ಲ ಎಂದು ವಿಲ್ ಕ್ಯಾತ್ ಕಾರ್ಟ್ ಹೇಳಿದ್ದಾರೆ.