ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಸೇವೆ ಎನ್ನಬಹುದಾದ ವಾಟ್ಸಾಪ್ ಕಾಲಕಾಲಿಕವಾಗಿ ಅಪ್ಡೇಟ್ ಆಗುತ್ತಾ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್‌ಗಳನ್ನು ಕೊಡಮಾಡುತ್ತಾ ಬಂದಿದೆ.
ಅಕ್ಟೋಬರ್ 2020ರ ಅಂತ್ಯಕ್ಕೆ ಎರಡು ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ಗೆ ಭಾರತವೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. 2020ರಲ್ಲಿ ಐದು ಹೊಸ ಫೀಚರ್‌ಗಳ ಮೂಲಕ ವಾಟ್ಸಾಪ್ ತನ್ನ ಬಳಕೆದಾರರಿಗೆ ಲೈಫ್ ಇನ್ನಷ್ಟು ಈಸಿ ಮಾಡಿದೆ.
1. ವಾಟ್ಸಾಪ್ ಪೇಮೆಂಟ್ಸ್
ಭಾರತದ ಎರಡು ಕೋಟಿ ಜನರಿಗೆ ಆನ್ಲೈನ್ ಪೇಮೆಂಟ್ ಸೇವೆಯನ್ನು ಒದಗಿಸಲು ಮುಂದಾಗಿದೆ ವಾಟ್ಸಾಪ್. ಈ ಸಂಬಂಧ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಫೇಸ್ಬುಕ್ ಮಾಲೀಕತ್ವದ ಮೆಸೇಜಿಂಗ್ ಡಿಗ್ಗಜ ವಾಟ್ಸಾಪ್ ಪೇಮೆಂಟ್ಸ್ ಸೇವೆಯನ್ನು ಪರಿಚಯಿಸಿದೆ.
ಎನ್‌ಪಿಸಿಐನ ಯುಪಿಐ ವ್ಯವಸ್ಥೆಯನ್ನೂ ಸಹ ತನ್ನ ಬಳಕೆದಾರರಿಗೆ ಕೊಡಮಾಡುತ್ತಿರುವ ವಾಟ್ಸಾಪ್ ಹಣ ವರ್ಗಾವಣೆಯನ್ನು ಇನ್ನಷ್ಟು ಸರಳವಾಗಿಸಿದೆ.
2. ಡಾರ್ಕ್ ಮೋಡ್
ವರ್ಷಾರಂಭದಲ್ಲಿ ಡಾರ್ಕ್ ಮೋಡ್ ಅನ್ನು ಪರಿಚಯಿಸಿದ ವಾಟ್ಸಾಪ್ ತನ್ನ ಆಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗೆ ಈ ಹೊಸ ಫೀಚರ್ ಕೊಡಮಾಡಿದೆ.
3. ಡಿಸಪಿಯರಿಂಗ್ ಮೆಸೇಜಸ್
ಏಳು ದಿನಗಳವರೆಗೂ ತೆರೆಯದೇ ಬಿಡುವ ಮೆಸೇಜ್‌ಗಳು ತನ್ನಿಂತಾನೇ ಮರೆಯಾಗುವಂತೆ ಮಾಡುತ್ತೆ ಈ ಫೀಚರ್
4. ಗ್ರೂಪ್ ವಿಡಿಯೋ/ವಾಯ್ಸ್ ಕಾಲ್
ಕೋವಿಡ್-19 ಲಾಕ್‌ಡೌನ್ ವೇಳೆ ಜನರ ನೆರವಿಗೆ ಬಂದ ವಾಟ್ಸಾಪ್ ಗ್ರೂಪ್ ಕಾಲಿಂಗ್‌ನಲ್ಲಿ ಭಾಗಿಯಾಗುವ ಜನರ ಗರಿಷ್ಠ ಮಿತಿಯನ್ನು ನಾಲ್ಕರಿಂದ ಎಂಟಕ್ಕೆ ಏರಿಸಿದೆ.
5. ಶಾಶ್ವತವಾಗಿ ಗ್ರೂಪ್‌ಗಳನ್ನು ಮ್ಯೂಟ್ ಮಾಡುವುದು
ವಿಪರೀತ ಕಿರಿಕಿರಿ ಮಾಡುವ ಸಂದೇಶಗಳು ಬರುತ್ತಲೇ ಇರುವ ಗ್ರೂಪ್‌ಗಳನ್ನು ಮ್ಯೂಟ್ ಮಾಡುವ ಅವಕಾಶವನ್ನು ವಾಟ್ಸಾಪ್ ಕೊಟ್ಟಿದೆ.
ಮ್ಯೂಟ್ ಸೆಟ್ಟಿಂಗ್ ತೆರೆದಾಗ ಸಿಗುವ ’ಆಲ್ವೇಸ್’ ಆಯ್ಕೆಯನ್ನು ಆರಿಸಿಕೊಳ್ಳುವ ಮೂಲಕ ನಮಗೆ ಬೇಡವೆನಿಸಿದ ಗ್ರೂಪ್ ಅನ್ನು ಶಾಶ್ವತವಾಗಿ ಮ್ಯೂಟ್ ಮಾಡಬಹುದು.