![](https://kannadadunia.com/wp-content/uploads/2021/01/WhatsApp-Myths-1-1024x569.jpg)
ಗೂಗಲ್ ಸರ್ಚ್ ಮೂಲಕ ನಿಮ್ಮ ವಾಟ್ಸಾಪ್ ಗ್ರೂಪ್ಗೆ ಯಾವ ಅಪರಿಚಿತರು ಬೇಕಿದ್ರೂ ಎಂಟ್ರಿ ಪಡೆಯಬಹುದಾಗಿದೆ. ಅಂದಹಾಗೆ ಈ ಸಮಸ್ಯೆ 2019ರಲ್ಲೂ ಕಾಣಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ವಾಟ್ಸಾಪ್ ಗ್ರೂಪ್ಗಳ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ.
ಅಂತರ್ಜಾಲ ಸೆಕ್ಯೂರಿಟಿ ಸಂಶೋಧಕ ರಾಜಶೇಖರ್ ರಾಜಹರಿಯಾ ಎಂಬವರು ಲಿಂಕ್ ಬಳಸಿ ವಾಟ್ಸಾಪ್ ಗ್ರೂಪ್ಗೆ ಸದಸ್ಯರನ್ನ ಸೇರಿಸಿಕೊಳ್ಳುವ ಗ್ರೂಪ್ಗಳಿಗೆ ಅಪಾಯ ಕಾದಿದೆ ಎಂದು ಹೇಳಿದ್ದಾರೆ.
ಕೆಲ ವಾಟ್ಸಾಪ್ ಗ್ರೂಪ್ಗಳ ಲಿಂಕ್ಗಳು ಗೂಗಲ್ನಲ್ಲೂ ಲಭ್ಯವಿದ್ದು ವಾಟ್ಸಾಪ್ನ ದುರ್ಬಲತೆಯನ್ನ ಪ್ರದರ್ಶಿಸುತ್ತಿದೆ ಎಂದು ಹೇಳಿದ್ದಾರೆ. ಬಹಳ ಸದಸ್ಯರನ್ನ ಹೊಂದಿರುವ ವಾಟ್ಸಾಪ್ ಗ್ರೂಪ್ಗಳಲ್ಲಿ ಅಪರಿಚಿತರು ಲಿಂಕ್ ಮೂಲಕ ಪ್ರವೇಶ ಪಡೆದಿದ್ದನ್ನ ಯಾರೂ ಗಮನಿಸದೇ ಹೋದಲ್ಲಿ ಅಪರಿಚಿತರು ಗ್ರೂಪ್ ಚಾಟ್ನ ಬಗ್ಗೆ ಮಾಹಿತಿ, ಸದಸ್ಯರ ಫೋಟೋ, ಹಾಗೂ ಮೊಬೈಲ್ ಸಂಖ್ಯೆಗಳನ್ನ ಬಹಳ ಸುಲಭವಾಗಿ ಕದಿಯುತ್ತಾರೆ.