ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಗೌಪ್ಯತಾ ಹೊಸ ನೀತಿಯನ್ನು ನೀಡಲಾಗಿದ್ದು ಬಳಕೆದಾರರು ಮೇ 15 ರೊಳಗೆ ಒಪ್ಪಿಕೊಳ್ಳಬೇಕಿದೆ.
ವಾಟ್ಸಾಪ್ ಚಾಟ್ ನಲ್ಲಿ ಸಣ್ಣ ಬ್ಯಾನರ್ ಪ್ರದರ್ಶಿಸಲಾಗುತ್ತಿದೆ. ಮುಂದಿನ ವಾರಗಳಲ್ಲಿ ಜನರು ತಮ್ಮದೇ ಆದ ರೀತಿಯಲ್ಲಿ ಓದುವಂತೆ ಹೆಚ್ಚಿನ ಮಾಹಿತಿ ಒದಗಿಸಲಾಗುವುದು. ವಾಟ್ಸಾಪ್ನಲ್ಲಿ ಹೊಸ ಗೌಪ್ಯತಾ ನೀತಿ ಮೇ 15, 2021 ರಿಂದ ಜಾರಿಗೆ ಬರಲಿದೆ.
ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನೀತಿಯನ್ನು ಭಾರತದಲ್ಲಿ ಹೊಸ ಅಭಿಯಾನದೊಂದಿಗೆ ಜಾರಿಗೊಳಿಸಲು ಮುಂದಾಗಿದೆ. ಫೇಸ್ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಗೌಪ್ಯತೆ ನೀತಿಯನ್ನು ಸೂಕ್ಷ್ಮವಾಗಿ ಇಡಲು ಪ್ರಯತ್ನಿಸಿದೆ. ಹೊಸ ನೀತಿ ಬದಲಾವಣೆಗಳನ್ನು ಮೊದಲು ಮತ್ತು ನಂತರ ಸ್ವೀಕರಿಸಲು ತನ್ನ ಬಳಕೆದಾರರಿಗೆ ಸಾಕಷ್ಟು ಸಮಯ ನೀಡಿದೆ. ಚಾಟ್ ಪಟ್ಟಿಯಲ್ಲಿ ಮೇಲ್ಭಾಗದಲ್ಲಿ ಸಣ್ಣ ಬ್ಯಾನರ್ ನಲ್ಲಿ ಇದು ಗೋಚರಿಸುತ್ತಿದ್ದು ಟ್ಯಾಪ್ ಟು ರಿವ್ಯೂ ಆಯ್ಕೆಯನ್ನು ನೀಡಲಾಗಿದೆ.
ಭಾರತದಲ್ಲಿ ವಾಟ್ಸಾಪ್ ಗೌಪ್ಯತೆ ಕುರಿತಾಗಿ ಚರ್ಚೆ ನಂತರ ನೀತಿ ಬದಲಾವಣೆಗೆ ಮುಂದಾಗಿದ್ದ ವಾಟ್ಸಾಪ್ ಕಳೆದ ತಿಂಗಳು ಭಾರೀ ಹಿನ್ನಡೆ ಅನುಭವಿಸುವಂತಾಗಿತ್ತು. ಇದರ ಪರಿಣಾಮ ಟೆಲಿಗ್ರಾಂ ಮತ್ತು ಸಿಗ್ನಲ್ ಆಪ್ ಗಳು ಡೌನ್ಲೋಡ್ ನಲ್ಲಿ ಭಾರೀ ಏರಿಕೆಯಾಗಿತ್ತು.