ಮುಂಬೈ: ಇನ್ನು ವಾಟ್ಸಾಪ್ ಮೂಲಕವೂ ಹಣ ಕಳಿಸಬಹುದು. ಫೋನ್ ಪೇ, ಗೂಗಲ್ ಪೇ ಇದ್ದಂತೆ ವಾಟ್ಸಾಪ್ ಪೇ ಭಾರತದಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿದೆ.
ವಾಟ್ಸಾಪ್ ಕಂಪನಿ ತಕ್ಷಣ ಹಣ ವರ್ಗಾವಣೆ ಮಾಡುವ ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಐಸಿಐಸಿಐ, ಎಕ್ಸಿಸ್, ಎಸ್ ಬಿಐ, ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಸೇರಿ 160 ಬ್ಯಾಂಕ್ ಗಳ ಜತೆ ಇದಕ್ಕಾಗಿ ಒಪ್ಪಂದ ಮಾಡಿಕೊಂಡಿದೆ.
ಆದರೆ, ವಾಟ್ಸಾಪ್ ಹೊಸ ಅಪ್ಲಿಕೇಶನ್ ಬಗ್ಗೆ ಟ್ವಿಟರ್ ನಲ್ಲಿ ಮಿಮ್ಸ್ ಗಳ ಹೊಳೆ ಹರಿದಿದೆ. ಸಾಕಷ್ಟು ಬಾಲಿವುಡ್ ಸಿನೆಮಾಗಳ ಡೈಲಾಗ್ ಬಳಸಿಕೊಂಡು ಮಿಮ್ಸ್ ಸೃಷ್ಟಿಸಿ ಹರಿಬಿಟ್ಟು ಹೊಸ ಅಪ್ಲಿಕೇಶನ್ ಟೀಕಿಸಲಾಗಿದೆ. ಇನ್ನು ಫ್ರೆಂಡ್ಸ್ ನನ್ನು ವಾಟ್ಸಾಪ್ ನಲ್ಲಿ ಬ್ಲಾಕ್ ಮಾಡೋದೇ ಒಳ್ಳೆಯದು ಎಂದು ಅರ್ಥ ಬರುವಂತೆ ಒಬ್ಬ ಮಿಮ್ಸ್ ಮಾಡಿದ್ದರೆ. ಇನ್ನೊಬ್ಬ ಸಾಧುವಿನ ಫೋಟೋ ಹಾಕಿ ಭವತಿ ಭಿಕ್ಷಾಂದೇಹಿ ಎಂದು ಬರೆದು ವಾಟ್ಸಾಪ್ ನಲ್ಲಿ ಹಣ ಕೇಳುವವರ ಸಂಖ್ಯೆ ಹೆಚ್ಚುತ್ತದೆ ಎಂದು ವಿಶ್ಲೇಷಿಸಿದ್ದಾರೆ.
https://twitter.com/Twiito2/status/1324644735105949696?ref_src=twsrc%5Etfw%7Ctwcamp%5Etweetembed%7Ctwterm%5E1324644735105949696%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwhatsapp-pay-is-finally-live-for-indian-users-and-twitter-is-paying-back-with-hilarious-memes-3050345.html