ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯವೊಂದನ್ನ ಪರಿಚಯಿಸಿದ್ದು ಇದರಿಂದಾಗಿ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸಾಪ್ನ್ನು ಲಾಗೌಟ್ ಮಾಡಬಹುದಾಗಿದೆ.
ಈ ಹೊಸ ಸೌಕರ್ಯದ ಮೂಲಕ ಫೇಸ್ಬುಕ್ ಒಡೆತನದ ವಾಟ್ಸಾಪ್ ಸಂಸ್ಥೆ ವಾಟ್ಸಾಪ್ ಖಾತೆ ಡಿಲೀಟ್ ಆಯ್ಕೆಯನ್ನ ತೆಗೆದು ಹಾಕಿದೆ.
ವಾಟ್ಸಾಪ್ ಖಾತೆದಾರರಿಗೆ ಪ್ರಸ್ತುತ ತಮ್ಮ ವಾಟ್ಸಾಪ್ ಖಾತೆಯನ್ನ ಡಿಲೀಟ್ ಮಾಡುವ ಆಯ್ಕೆ ಇದೆ. ಆದರೆ ಇನ್ಮುಂದೆ ಫೇಸ್ಬುಕ್, ಇನ್ಸ್ಟಾಗ್ರಾಂನಂತೆಯೇ ವಾಟ್ಸಾಪ್ನಿಂದಲೂ ಲಾಗೌಟ್ ಮಾಡಬಹುದಾಗಿದೆ.
ಇನ್ನು ಈ ಸಂಬಂಧ ಮಾಹಿತಿ ನೀಡಿರುವ ವಾಟ್ಸಾಪ್ ಸಂಸ್ಥೆ, ಶೀಘ್ರದಲ್ಲಿಯೇ ಡಿಲೀಟ್ ಅಕೌಂಟ್ ಎಂಬ ಆಯ್ಕೆಯನ್ನ ತೆಗೆದು ಲಾಗೌಟ್ ಆಯ್ಕೆಯನ್ನ ನೀಡಲಿದ್ದೇವೆ. ಐಓಎಸ್ ಹಾಗೂ ಆಂಡ್ರಾಯ್ಡ್ಗಳೆರಡಲ್ಲಿಯೂ ಈ ಆಯ್ಕೆ ಸಿಗಲಿದೆ ಎಂದು ಗೇಳಿದೆ.
ಇದರ ಜೊತೆಯಲ್ಲಿ ವಾಟ್ಸಾಪ್ ಮಲ್ಟಿ ಡಿವೈಸ್ ಸಪೋರ್ಟ್ ಎಂಬ ಇನ್ನೊಂದು ಆಯ್ಕೆಯನ್ನ ತರೋಕೆ ಸಿದ್ಧತೆ ನಡೆಸುತ್ತಿದೆ. ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರು ಒಂದೇ ವಾಟ್ಸಾಪ್ ಖಾತೆಯನ್ನ ಎರಡ್ಮೂರು ಕಡೆ ಬಳಕೆ ಮಾಡಬಹುದಾಗಿದೆ.