ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ವಾಟ್ಸಾಪ್ ಹೊಸ ವೈಶಿಷ್ಟಗಳನ್ನು ಪರಿಚಯಿಸಿದೆ. ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಸುಧಾರಿಸಲು ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿರುವ ವಾಟ್ಸಾಪ್ ಬಳಕೆದಾರರಿಗೆ ವೈಯಕ್ತಿಕ ಚಾಟ್ ಗಳ ವಾಲ್ ಪೇಪರ್ ಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತಿದೆ.
ಐಒಎಸ್ ಆವೃತ್ತಿಯಲ್ಲಿ ಈ ಅಪ್ಲಿಕೇಶನ್ ವೈಶಿಷ್ಟವನ್ನು ಗುರುತಿಸಲಾಗಿದ್ದು ಆಂಡ್ರಾಯ್ಡ್ ನಲ್ಲಿ ವೈಶಿಷ್ಟ್ಯ ರೂಪಿಸಲಾಗುತ್ತಿದೆ. ವಾಟ್ಸಾಪ್ ಬೀಟಾ ಆವೃತ್ತಿಯನ್ನು ಟ್ರ್ಯಾಕ್ ಮಾಡುವ ವೆಬ್ಸೈಟ್ ಪ್ರಕಾರ, ಹೊಸ ವಾಲ್ ಪೇಪರ್ ವೈಶಿಷ್ಟ ಬಳಕೆದಾರರಿಗೆ ಚಾಲ್ತಿಯಲ್ಲಿರುವ ಆಧಾರದ ಥೀಮ್ ಆಧಾರದ ಮೇಲೆ ವಿಭಿನ್ನ ವಾಲ್ ಪೇಪರ್ ಆಯ್ಕೆ ಮಾಡಲು ಅನುಮತಿಸುತ್ತದೆ ಎಂದು ಹೇಳಲಾಗಿದೆ.
ಬಳಕೆದಾರರು ಡಿಪಾಲ್ಟ್ ವಾಲ್ ಪೇಪರ್ ಆಯ್ಕೆ ಮಾಡಲು ಬಯಸಿದ್ದಲ್ಲಿ ಅಧಿಕೃತ ವಾಲ್ ಪೇಪರ್ ಅಪ್ಲಿಕೇಷನ್ ನನ್ನು ಡೌನ್ಲೋಡ್ ಮಾಡಲು ಬಯಸುವಿರಾ ಎಂದು ಪ್ಲಾಟ್ ಫಾರ್ಮ್ ಕೇಳುತ್ತದೆ. ಐಒಎಸ್ ಆವೃತ್ತಿ ವಿಭಿನ್ನ ಚಾಟ್ದ ಗಳಿಗಾಗಿ ವಿಭಿನ್ನ ವಾಲ್ ಪೇಪರ್ ಗಳನ್ನು ಆಯ್ಕೆಮಾಡಲು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಲಾಗಿದೆ.
ಈ ವೈಶಿಷ್ಟ್ಯ ಶೀಘ್ರದಲ್ಲೇ ಅಂಡ್ರಾಯಿಡ್ ಬೀಟಾ ಬಳಕೆದಾರರಿಗೆ ಈ ವೈಶಿಷ್ಟ ಸಿಗಲಿದೆ. ಇನ್ನು ವಾಟ್ಸಾಪ್ ಆಪ್ಲಿಕೇಶನ್ ಡೇಟಾ ಮತ್ತು ಸೆಟ್ಟಿಂಗ್ ಗಳಲ್ಲಿ ಇದರಿಂದ ವಾಟ್ಸಾಪ್ ಬಳಸುವ ಒಟ್ಟು ಸಂಗ್ರಹಣೆಯನ್ನು ನೋಡಬಹುದು. ಫೈಲ್ ಗಳನ್ನು ಪರಿಶೀಲಿಸಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.