ವಾಟ್ಸ್ ಅಪ್ ಬಳಕೆದಾರರಿಗೆ ಮಹತ್ವದ ಸುದ್ದಿಯೊಂದಿದೆ. ನಿಮ್ಮ ಫೋನ್ ನಲ್ಲಿರುವ ವಾಟ್ಸ್ ಅಪ್ ಇನ್ಮುಂದೆ ಕೆಲಸ ಮಾಡುವುದಿಲ್ಲ. ಈ ಬಗ್ಗೆ ವಾಟ್ಸ್ ಅಪ್ ಮಾಹಿತಿ ನೀಡಿದೆ. ಕೆಲ ಹಳೆಯ ಆಪರೇಟಿಂಗ್ ಸಿಸ್ಟಂಗಳಲ್ಲಿ ವಾಟ್ಸ್ ಅಪ್ ಕೆಲಸ ನಿಲ್ಲಿಸಲಿದೆ.
ಮಾಹಿತಿಯ ಪ್ರಕಾರ, ಆಪಲ್ ನ ಹಳೆಯ ಆಪರೇಟಿಂಗ್ ಸಿಸ್ಟಮ್ ನಲ್ಲಿ ವಾಟ್ಸಾಪ್ ಇನ್ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಐಒಎಸ್ 9 ಮತ್ತು ಹಳೆಯ ಆಪರೇಟಿಂಗ್ ಸಿಸ್ಟಂನ ಐಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ವಾಟ್ಸ್ ಅಪ್ ಸ್ಪಷ್ಟಪಡಿಸಿದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ಆಂಡ್ರಾಯ್ಡ್ 4.0.3 ಗಿಂತ ಹಳೆಯ ಆಪರೇಟಿಂಗ್ ಸಿಸ್ಟಮ್‌ನಲ್ಲಿ ವಾಟ್ಸ್ ಅಪ್ ಬರುವುದಿಲ್ಲ.
ಶೀಘ್ರವೇ FAQ ಪೇಜನ್ನು ನವೀಕರಿಸಲಾಗುವುದು ಎಂದು ವಾಟ್ಸಾಪ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲಿ ವಾಟ್ಸಾಪ್ ಬೆಂಬಲಿಸುವ ಆಪರೇಟಿಂಗ್ ಸಿಸ್ಟಂಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಬಳಸಲು,ಮೊಬೈಲ್ ಆಪರೇಟಿಂಗ್ ಸಿಸ್ಟಮ್ ನವೀಕರಿಸಬೇಕು.