alex Certify ರಾತ್ರಿ ವಾಟ್ಸಾಪ್, ಫೇಸ್ ಬುಕ್ ಬಂದ್. ಸರ್ವರ್ ಡೌನ್ ಆಗಿ ಗ್ರಾಹಕರು ಕಂಗಾಲು –ಬಳಿಕ ಸರಿಯಾದ ಸೋಷಿಯಲ್ ಮೀಡಿಯಾ ಸೈಟ್, ನಿಟ್ಟುಸಿರು ಬಿಟ್ಟ ಬಳಕೆದಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ವಾಟ್ಸಾಪ್, ಫೇಸ್ ಬುಕ್ ಬಂದ್. ಸರ್ವರ್ ಡೌನ್ ಆಗಿ ಗ್ರಾಹಕರು ಕಂಗಾಲು –ಬಳಿಕ ಸರಿಯಾದ ಸೋಷಿಯಲ್ ಮೀಡಿಯಾ ಸೈಟ್, ನಿಟ್ಟುಸಿರು ಬಿಟ್ಟ ಬಳಕೆದಾರರು

ನವದೆಹಲಿ: ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಹಲವು ಜಾಲತಾಣಗಳ ಸರ್ವರ್ ಡೌನ್ ಆಗಿ ಸೇವೆಯಲ್ಲಿ ಅಡಚಣೆಯಾಗಿ ಬಳಕೆದಾರರು ಗಂಟೆಗಟ್ಟಲೆ ತೊಂದರೆ ಅನುಭವಿಸಿದ್ದಾರೆ.

ರಾತ್ರಿ 9 -10 ಗಂಟೆ ಸುಮಾರಿಗೆ ಈ ಅಡಚಣೆ ಉಂಟಾಗಿದ್ದು, ಬಳಕೆದಾರರು ತಮಗೆ ಆದ ತೊಂದರೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಜಾಲತಾಣಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಹೊಸ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿಲ್ಲ.

ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸೋಮವಾರ ರಾತ್ರಿ ಭಾರತ ಮತ್ತು ವಿಶ್ವದ ಕೆಲವು ಭಾಗಗಳಲ್ಲಿ ಸ್ಥಗಿತಗೊಂಡಿದೆ. WhatsApp ಸರ್ವರ್ ದೋಷವನ್ನು ತೋರಿಸಿದ್ದು, Instagram ಬಳಕೆದಾರರ ಫೀಡ್ ಅನ್ನು ರಿಫ್ರೆಶ್ ಮಾಡಲಿಲ್ಲ.

ಕ್ಷಮಿಸಿ, ಏನೋ ಸರಿಯಾಗಿಲ್ಲ. ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ ಮತ್ತು ನಾವು ಅದನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿತ್ತು.

ಈ ಸಮಯದಲ್ಲಿ ಕೆಲವರು ವಾಟ್ಸಾಪ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಸಾಧ್ಯವಾದಷ್ಟು ಬೇಗ ಇಲ್ಲಿ ಅಪ್‌ಡೇಟ್ ಕಳುಹಿಸುತ್ತೇವೆ ಎಂದು ವಾಟ್ಸಾಪ್ ಹೇಳಿತ್ತು.

ಗಂಟೆಗಳ ನಂತರ ಫೇಸ್ ಬುಕ್, ವಾಟ್ಸಾಪ್ ಸೇವೆ ಸರಿಯಾಗಿದ್ದು, ಬಳಕೆದಾರರು ನಿಟ್ಟುಸಿರುವ ಬಿಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...