ಕೇರಳದ ಕೊಟ್ಟಾಯಂನಲ್ಲಿ ವರ್ಷಗಳ ಹಿಂದೆ ಆರಂಭಗೊಂಡ ’ಕೊರೋನಾ’ ಹೆಸರಿನ ಸ್ಟೋರ್ ಒಂದು ಕೋವಿಡ್-19 ಸಾಂಕ್ರಮಿಕ ವ್ಯಾಪಿಸಿದ ಬಳಿಕ ಭಾರೀ ಬ್ಯುಸಿನೆಸ್ ಕಾಣುತ್ತಿದೆ.
ಇಲ್ಲಿನ ಕಲತ್ತಿಪಾಡಿ ಪ್ರದೇಶದಲ್ಲಿರುವ ಈ ಸ್ಟೋರ್‌ನಲ್ಲಿ ಸಸಿಗಳು, ಪಾಟ್‌ಗಳು, ದೀಪಗಳು ಹಾಗೂ ಗೃಹಬಳಕೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಏಳು ವರ್ಷಗಳ ಹಿಂದೆ ಇಂಟೀರಿಯರ್ ಡಿಸೈನ್ ವಸ್ತುಗಳ ಮಾರಾಟಕ್ಕೆಂದು ಲ್ಯಾಟಿನ್ ಭಾಷೆಯಲ್ಲಿ ’ಕಿರೀಟ’ ಎಂಬ ಅರ್ಥ ಬರುವ ಕೊರೋನಾ ಎಂಬ ಶಬ್ದವನ್ನು ತನ್ನ ಸ್ಟೋರ್‌ಗೆ ಇಡಲು ಆರಿಸಿಕೊಂಡಿದ್ದರು ಮಾಲೀಕ ಜಾರ್ಜ್.
“ಕೋವಿಡ್-19 ಸಾಂಕ್ರಮಿಕದೊಂದಿಗೆ ನನ್ನ ಸ್ಟೋರ್ನ ಹೆಸರು ಥಳುಕು ಹಾಕಿಕೊಂಡಿರುವ ಕಾರಣದಿಂದ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ಕೊಡುತ್ತಿದ್ದಾರೆ. ಈ ಕಾರಣದಿಂದ ನನ್ನ ಉದ್ಯಮ ಚೆನ್ನಾಗಿ ನಡೆಯುತ್ತಿದೆ” ಎನ್ನುತ್ತಾರೆ ಜಾರ್ಜ್.