ದೇಶದ ಸರ್ಕಾರಿ ಹಾಗೂ ಹಲವು ಸರ್ಕಾರೇತರ ಸೇವೆಗಳನ್ನ ಪಡೆಯಬೇಕು ಅಂದರೆ ನೀವು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡ್ನ್ನು ಕಡ್ಡಾಯ ಬಳಕೆ ಮಾಡಬೇಕಾಗುತ್ತದೆ. ಹೀಗಾಗಿ ಆಧಾರ್ ಕಾರ್ಡ್ನಲ್ಲಿ ನಮೂದಿಸಲಾಗಿರುವ ನಿಮ್ಮ ವಿವರ ಸಂಪೂರ್ಣವಾಗಿ ಸರಿಯಾಗಿದೆಯೇ ಅನ್ನೋದನ್ನ ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಆಧಾರ್ ಕಾರ್ಡ್ ಮಾಹಿತಿಯನ್ನ ಆನ್ಲೈನ್ನಲ್ಲಿ ನೀವು ಬದಲಾವಣೆ ಮಾಡುವ ಸಂದರ್ಭದಲ್ಲಿ ನಿಮಗೆ ಯುಆರ್ಎನ್ ಸಂಖ್ಯೆ ಸಿಗಲಿದೆ. ಈ 14 ಸಂಖ್ಯೆಯನ್ನ ನಮೂದಿಸುವ ಮೂಲಕ ನೀವು ಆಧಾರ್ ಕಾರ್ಡ್ನಲ್ಲಿ ಬದಲಾವಣೆಗಳನ್ನ ಮಾಡಬಹುದಾಗಿದೆ.
ಯುಆರ್ಎನ್ ಸ್ಟೇಟಸ್ನ್ನು ನೀವು ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಪರಿಶೀಲನೆ ಮಾಡಬಹುದಾಗಿದೆ. ಈ ಯುಆರ್ಎನ್ ಸಂಖ್ಯೆಯನ್ನ ನೀವು ಗೌಪ್ಯವಾಗಿ ಇಡಬೇಕು. ಈ ಯುಆರ್ಎನ್ ಸಹಾಯದಿಂದ ನಿಮ್ಮ ಆಧಾರ್ ಕಾರ್ಡ್ನಲ್ಲಿ ಬದಲಾವಣೆ ಮಾಡಬಹುದಾದ್ದರಿಂದ ಇದನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
https://ssup.uidai.gov.in/ssup/ ಗೆ ಲಾಗಿನ್ ಆಗಿ
ಇದರಲ್ಲಿ ಚೆಕ್ ಸ್ಟೇಟಸ್ ಟ್ಯಾಬ್ ಆಯ್ಕೆ ಮಾಡಿ.
ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಯುಆರ್ಎನ್ ಸಂಖ್ಯೆಯನ್ನು ನಮೂದಿಸಿ.
ಇದಾದ ಬಳಿಕ ಸೆಕ್ಯೂರಿಟಿ ಕೋಡ್ ಹಾಗೂ ವೆರಿಫಿಕೇಶನ್ ವಿವರಗಳನ್ನ ಒದಗಿಸಿ.
ಅಂತ್ಯದಲ್ಲಿ ಗೆಟ್ ಸ್ಟೇಟಸ್ನಲ್ಲಿ ನಿಮ್ಮ ಯುಆರ್ಎನ್ ಮಾಹಿತಿ ತಿಳಿದುಕೊಳ್ಳಿ.
ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನ ಆನ್ಲೈನ್ ನಲ್ಲಿ ತಿದ್ದುಪಡಿ ಮಾಡುವ ವೇಳೆಗೆ ನಿಮಗೆ ಒಂದು ಸ್ಲಿಪ್ ಸಿಗುತ್ತೆ. ಇದರಲ್ಲಿ ನಿಮ್ಮ ಯುಆರ್ಎನ್ ಹಾಗೂ ಎಸ್ಆರ್ಎನ್ ಸಂಖ್ಯೆಗಳು ನಮೂದಾಗಿ ಇರುತ್ತೆ. ಯುಆರ್ಎನ್ ಅನ್ನೋದು 14 ಸಂಖ್ಯೆಯನ್ನ ಹೊಂದಿದ್ದರೆ ಎಸ್ಆರ್ಎನ್ 28 ಸಂಖ್ಯೆಯನ್ನ ಹೊಂದಿರುತ್ತೆ.
ಒಮ್ಮೆ ನೀವು ಆಧಾರ್ ಕಾರ್ಡ್ ರಿಕ್ವೆಸ್ಟ್ ಅಪ್ಡೇಟ್ ಮಾಡಲು ಆರಂಭಿಸಿದ್ರೆ ಅದನ್ನ ಮತ್ತೆ ಕ್ಯಾನ್ಸಲ್ ಮಾಡಲು ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಹಳೆಯ ಮಾಹಿತಿಯನ್ನೇ ಆಧಾರ್ನಲ್ಲಿ ಇಡಬೇಕು ಎಂದು ಬಯಸಿದ್ರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದಾಗಿದೆ.