ಎಟಿಎಂ ಬರುವ ಮೊದಲು ಜನರು ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದರು. ಆದ್ರೆ ಎಟಿಎಂ ಜನರ ಸಮಸ್ಯೆಗೆ ದೊಡ್ಡ ಪರಿಹಾರ ನೀಡಿದೆ. ಈಗಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಬಂದರೂ ಎಟಿಎಂ ತನ್ನ ಸ್ಥಾನ ಕಾಯ್ದುಕೊಂಡಿದೆ. ಎಟಿಎಂ ಆವಿಷ್ಕಾರ ಹಾಗೂ ಭಾರತದ ಮಧ್ಯೆ ನಿಕಟ ಸಂಬಂಧವಿದೆ.
1987ರ ಸುಮಾರಿಗೆ ಭಾರತಕ್ಕೆ ಎಟಿಎಂ ಯಂತ್ರ ಬಂತು. ಹಾಂಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್ ಕಾರ್ಪೊರೇಶನ್ ಲಿಮಿಟೆಡ್ ಮುಂಬೈ ಶಾಖೆಯಲ್ಲಿ ಮೊದಲ ಎಟಿಎಂ ಶುರು ಮಾಡಿತ್ತು. ನಂತ್ರ ಕ್ರಮೇಣ ದೇಶದಾದ್ಯಂತ ಎಟಿಎಂ ತೆರೆಯಲಾಯ್ತು. ಹಣ ಪಡೆಯಲು ಇದು ಉತ್ತಮ ಮಾರ್ಗವಾಗಿದೆ.
ಜೂನ್ 27,1967ರಲ್ಲಿ ವಿಶ್ವದ ಮೊದಲ ಎಟಿಎಂ ಯಂತ್ರವನ್ನು ಲಂಡನ್‌ನ ಎನ್‌ಫೀಲ್ಡ್ ನಲ್ಲಿ ಸ್ಥಾಪಿಸಲಾಯಿತು. ಬಾರ್ಕ್ಲೇಸ್ ಶಾಖೆಯು ಮೊದಲ ಬಾರಿ ಎಟಿಎಂ ಯಂತ್ರ ಅಳವಡಿಸಿತ್ತು. ಜಾನ್ ಶೆಫರ್ಡ್ ಬ್ಯಾರನ್ ಮತ್ತು ಅವರ ತಂಡ ಎಟಿಎಂ ತಯಾರಿಸಿತ್ತು. ಎಟಿಎಂನ ಸಂಶೋಧಕ ಜಾನ್ ಶೆಫರ್ಡ್ ಭಾರತದ ಮೇಘಾಲಯ ಮೂಲದವರು. ಜಾನ್ ಶೆಫರ್ಡ್ ಬ್ಯಾರನ್ 1925 ರಲ್ಲಿ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಜನಿಸಿದ್ದರು.