ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಸ್ಕ್ರ್ಯಾಪ್ ನೀತಿ ಪ್ರಕಟಿಸಿದ್ದಾರೆ. ಹಳೆಯ ವಾಹನಗಳಿಗೆ ಸರ್ಕಾರ ಸ್ಕ್ರ್ಯಾಪ್ ನೀತಿಯನ್ನು ವಿಧಿಸಲಿದೆ. ಪ್ರತಿ ವಾಹನಕ್ಕೂ ಫಿಟ್‌ನೆಸ್ ಪ್ರಮಾಣಪತ್ರ ಅಗತ್ಯವಾಗಲಿದೆ. ಸ್ವಯಂಪ್ರೇರಿತ ಸ್ಕ್ರ್ಯಾಪ್ ನೀತಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.
ಇದು ಮಧ್ಯಮ ಮತ್ತು ಕೆಳವರ್ಗದವರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಳೆ ವಾಹನಗಳನ್ನು ಜನರು ಸ್ಕ್ರ್ಯಾಪ್ ಗೆ ಹಾಕಬೇಕಾಗುತ್ತದೆ. ಅದನ್ನು ರಸ್ತೆಗೆ ಇಳಿಸುವಂತಿಲ್ಲ. ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದು ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಹರಿಸುತ್ತದೆ. ಏರ್ ಕ್ಲೀನ್ ಗಾಗಿ 5 ವರ್ಷಗಳಲ್ಲಿ 2000 ಕೋಟಿ ರೂಪಾಯಿಗಳನ್ನು ಸಹ ಖರ್ಚು ಮಾಡಲಾಗುವುದು. ಸ್ವಯಂಚಾಲಿತ ಫಿಟ್‌ನೆಸ್ ಕೇಂದ್ರಗಳನ್ನು ನಿರ್ಮಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದೆ.
ಹಳೆ ವಾಹನಗಳ ಬಳಕೆ ಕುರಿತಂತೆ ʼಬಜೆಟ್ʼ ನಲ್ಲಿ ಮಹತ್ವದ ನಿರ್ಧಾರ
ಖಾಸಗಿ ಕಾರು 20 ವರ್ಷಗಳ ನಂತರ ಈ ಕೇಂದ್ರಗಳಿಗೆ ಹೋಗಲಿದೆ. ಕಾರು ಖರೀದಿ ಮಾಡಿ 20 ವರ್ಷಗಳ ನಂತ್ರ ಅದನ್ನು ರಸ್ತೆಗಿಳಿಸುವಂತಿಲ್ಲ. ವೈಯಕ್ತಿಕ ವಾಹನವನ್ನು 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳನ್ನು 15 ವರ್ಷಗಳ ನಂತ್ರ ಸ್ವಯಂಚಾಲಿತ ಫಿಟ್‌ನೆಸ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಸ್ಕ್ರ್ಯಾಪ್ ಮಾಡಲಾಗುವುದು. ಸ್ಕ್ರ್ಯಾಪ್ ಕೇಂದ್ರಗಳನ್ನು ತೆರೆಯುವುದರಿಂದ ಅನೇಕರಿಗೆ ಉದ್ಯೋಗ ಸಿಗಲಿದೆ.
ಈ ನೀತಿಯ ಮೂಲಕ ಹಳೆಯ ಕಾರುಗಳನ್ನು ರಸ್ತೆಗಳಿಂದ ತೆಗೆದು ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳು ಮರುಮಾರಾಟ ಮೌಲ್ಯವನ್ನು ಕಡಿಮೆ ಹೊಂದಿರುತ್ತವೆ. ಬಹಳಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತವೆ. ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ ಬಹುನಿರೀಕ್ಷಿತವಾಗಿತ್ತು.
2022 ರ ಏಪ್ರಿಲ್‌ನಿಂದ 15 ವರ್ಷದ ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್‌ಗೆ ಹಾಕುವ ನೀತಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದಿಸಿದೆ. 2030 ರ ವೇಳೆಗೆ ದೇಶವನ್ನು ಸಂಪೂರ್ಣವಾಗಿ ಇ-ಮೊಬಿಲಿಟಿಗೆ ಸ್ಥಳಾಂತರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ. ಕಚ್ಚಾ ತೈಲ ಆಮದು ಕಡಿಮೆ ಮಾಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ.