alex Certify ʼಆಧಾರ್ʼ ಲಾಕ್​ – ಅನ್​ಲಾಕ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ ಲಾಕ್​ – ಅನ್​ಲಾಕ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ದೇಶದಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕು ಅಂದರೆ ಆಧಾರ್​ ಕಾರ್ಡ್​ ಬಳಕೆ ಕಡ್ಡಾಯ. ಆದಾಯ ತೆರಿಗೆ ಪಾವತಿಯಿಂದ ಹಿಡಿದು ಪಾನ್​ ಕಾರ್ಡ್​ಗೆ ಲಿಂಕ್​ ಮಾಡುವವರೆಗೂ ಆಧಾರ್ ಕಾರ್ಡ್ ಬಳಕೆ ಪ್ರತಿಯೊಂದು ಹಂತದಲ್ಲಿದೆ.

ಆಧಾರ್​ ಕಾರ್ಡ್​ ನಮ್ಮ ಪ್ರತಿಯೊಂದು ಕೆಲಸಕ್ಕೂ ಅವಶ್ಯಕವಾಗಿ ಬೇಕಾಗಿರುವ ದಾಖಲೆಯಾಗಿರೋದ್ರಿಂದ ಇದನ್ನ ಸುರಕ್ಷಿತವಾಗಿ ಇಟ್ಟುಕೊಳ್ಳೋದು ಅತ್ಯವಶ್ಯಕ. ಇದಕ್ಕಾಗಿ ವಿಶಿಷ್ಟ ಗುರುತು ಪ್ರಾಧಿಕಾರ ಲಾಕ್​​ ಹಾಗೂ ಅನ್​ಲಾಕ್​ ಆಧಾರ್​ ಕಾರ್ಡ್ ಎಂಬ ಹೊಸ ಸೌಲಭ್ಯವನ್ನ ಪರಿಚಯಿಸಿದೆ.

ನೀವು ಒಮ್ಮೆ ಆಧಾರ್​ ಕಾರ್ಡ್​ನ್ನು ಲಾಕ್​ ಮಾಡಿದ್ರೆ ಸಾಕು ಅದನ್ನ ನೀವಾಗೇ ಅನ್​ಲಾಕ್​ ಮಾಡುವವರೆಗೂ ನಿಮ್ಮ 12 ಸಂಖ್ಯೆಯ ಆಧಾರ್​ ನಂಬರ್​ನ್ನು ಯಾರೂ ಬಳಕೆ ಮಾಡಲು ಸಾಧ್ಯವಿಲ್ಲ.

ನಿಮ್ಮ ಆಧಾರ್​ ಕಾರ್ಡ್​ನ್ನು ಲಾಕ್​ ಮಾಡಲು ಈ ರೀತಿ ಮಾಡಿ :

1. ಆಧಾರ್​ ಕಾರ್ಡ್ ಸಂಖ್ಯೆಯನ್ನ ಲಾಕ್​ ಮಾಡಲು ನೀವು 16 ಸಂಖ್ಯೆಯ ವಿಐಡಿಯನ್ನ ಹೊಂದಿರೋದು ಅನಿವಾರ್ಯವಾಗಿರಲಿದೆ.

2. ಈ ಐಡಿ ನಿಮ್ಮ ಬಳಿ ಇಲ್ಲದೇ ಹೋದಲ್ಲಿ ನೀವು ನೋಂದಾಯಿತ ಮೊಬೈಲ್​ ಸಂಖ್ಯೆಯ ಮೂಲಕ GVID ಸ್ಪೇಸ್​​ ಕೊನೆಯ 4 ಅಥವಾ8 ಸಂಖ್ಯೆಯ ಯುಐಡಿಯನ್ನ ನಮೂದಿಸಿ. ಈ ಎಸ್​ಎಂಎಸ್​ನ್ನು 1947ಕ್ಕೆ ಕಳುಹಿಸಿ.

3. ಆಧಾರ್​ ಸರ್ವೀಸ್​ ವೆಬ್​ಸೈಟ್​ನ್ನು ಓಪನ್ ಮಾಡಿ.

4. ಯುಐಡಿ ಲಾಕ್​ ರೆಡಿಯೋ ಬಟನ್​ ಆಯ್ಕೆ ಮಾಡಿ ಯುಐಡಿ ಸಂಖ್ಯೆ ನಮೂದಿಸಿ, ಪೂರ್ತಿ ಹೆಸರು ಹಾಗೂ ಪಿನ್​ಕೋಡ್​ ಮತ್ತು ಸೆಕ್ಯೂರಿಟಿ ಕೋಡ್​ನ್ನು ಎಂಟರ್​ ಮಾಡಿ.

5. ಒಟಿಪಿ ಆಯ್ಕೆಯನ್ನ ಕ್ಲಿಕ್ಕಿಸಿ ಅಥವಾ ಟಿಒಟಿಪಿ ಆಯ್ಕೆಯನ್ನ ಕ್ಲಿಕ್ಕಿಸಿ ಬಳಿಕ ಸಬ್​ಮಿಟ್​ ಕೊಡಿ.

6. ಈಗ ನಿಮ್ಮ ಆಧಾರ್​ ಸಂಖ್ಯೆ ಲಾಕ್​ ಆಗಿದೆ.

ಆಧಾರ್​ ಸಂಖ್ಯೆ ಅನ್​ಲಾಕ್​ ಮಾಡುವುದು ಹೇಗೆ..?

1. ಆಧಾರ್​ ಸಂಖ್ಯೆ ಅನ್​ಲಾಕ್​ ಮಾಡಲೂ ಸಹ ನೀವು ವಿಐಡಿ ಸಂಖ್ಯೆಯನ್ನ ಹೊಂದಿರೋದು ಕಡ್ಡಾಯ. ವಿಐಡಿ ಸಂಖ್ಯೆ ಮರೆತು ಹೋದಲ್ಲಿ ರಿವಿಐಡಿ ಸ್ಪೇಸ್​ ಕೊನೆಯ 4 ಅಥವಾ 8 ಡಿಜಿಟ್​ ಆಧಾರ್​ ಸಂಖ್ಯೆಯನ್ನ ನಮೂದಿಸಿ 1947ಕ್ಕೆ ಸೆಂಡ್​ ಮಾಡಿ.

2. ರೆಡಿಯೋ ಬಟನ್​​ ಅನ್​ಲಾಕ್​ ಆಯ್ಕೆ ಮಾಡಿ.

3. ವಿಐಡಿ ಸೆಕ್ಯೂರಿಟಿ ಕೋಡ್​​ ನಮೂದಿಸಿ ಸೆಂಡ್​ ಒಟಿಪಿ ಆಯ್ಕೆ ಮೇಲೆ ಕ್ಲಿಕ್ಕಿಸಿ. ಅಥವಾ ಟಿಒಟಿಪಿ ಆಯ್ಕೆ ಮಾಡಿ ಸಬ್​ಮಿಟ್​ ಕ್ಲಿಕ್ಕಿಸಿ.

4. ಇದೀಗ ನಿಮ್ಮ ಆಧಾರ್​ ಸಂಖ್ಯೆ ಅನ್​ಲಾಕ್​ ಆಗಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...